ಉತ್ತಮ ಸಮಾಜಕ್ಕಾಗಿ

26 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕಳ್ಳರಿಬ್ಬರನ್ನು ಬಂಧಿಸಿದ್ದು ಇಂದು ಸುದ್ದಿಗೋಷ್ಠಿ

The thieves arrested 26 persons involved in the theft

0

ಬೆಳಗಾವಿ: ಸುಮಾರು 26 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕಳ್ಳರಿಬ್ಬರನ್ನು CCB ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದು ಅವರಿಂದ ₹16 ಲಕ್ಷ ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಕಳೆದ 2016-17 ಸಾಲಿನಿಂದ ಇತ್ತೀಚಿನವರೆಗೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳ ಪತ್ತೆ ಮಾಡಲಾಗಿದ್ದು, ಮಹಮದ್ ಅಜರುದ್ದೀನ್ ಶಬ್ಬೀರ ಮುಲ್ಲಾ(26) ಹಾಗೂ ರಫೀಕ್ ಇಸ್ತಾಕ ಅಹ್ಮದ್ ಶೇಖ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಆರೊಪಿತರಿಂದ 541ಗ್ರಾಂ. ಚಿನ್ನ, 2.133 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದರು.

26 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕಳ್ಳರಿಬ್ಬರನ್ನು ಬಂಧಿಸಿದ್ದು ಇಂದು ಸುದ್ದಿಗೋಷ್ಠಿ- Tarun krantiಮಾರ್ಕೆಟ್ ಠಾಣೆಯ ಎರಡು ಪ್ರಕರಣ, ಶಹಾಪುರ ಠಾಣೆಯ 4, ಎಪಿಎಂಸಿ ಠಾಣೆಯ 5, ಗ್ರಾಮೀಣ ಠಾಣೆಯ 4, ಮಾಳಮಾರುತಿ ಠಾಣೆಯ 9, ಕ್ಯಾಂಪ್ ಠಾಣೆಯ 1 ಹಾಗೂ ಕಾಕತಿ ಠಾಣೆಯ 1 ಪ್ರಕರಣ ಪತ್ತೆಯಾಗಿವೆ ಎಂದರು. ಜತೆಗೆ ಗೋವಾ, ಮಹಾರಾಷ್ಟ್ರ, ಆಂದ್ರ, ಹುಬ್ಬಳ್ಳಿ ಧಾರವಾಡ, ರಾಮನಗರ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾದದ್ದು ಸುಳಿವು ಸಿಕ್ಕಿದೆ ಎಂದರು.

ಡಿಸಿಪಿ ಸೀಮಾ ಲಾಟಕರ, ಕ್ರೈಮ್ ಮತ್ತು ಟ್ರಾಫಿಕ್ ಡಿಸಿಪಿ ಮಹಾನಿಂಗ ನಂದಗಾಂವಿ, ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ, ಪಿಎಸ್ ಐ ಜಯಶ್ರೀ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.The thieves arrested 26 persons involved in the theft

Leave A Reply

 Click this button or press Ctrl+G to toggle between Kannada and English

Your email address will not be published.