ಉತ್ತಮ ಸಮಾಜಕ್ಕಾಗಿ

ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ ಆರೋಪಿತನಿಗೆ:10 ವರ್ಷ ಸಜೆ ಹಾಗೂ ₹26ಸಾವಿರ ದಂಡ:

news belagavi

0

ಬೆಳಗಾವಿ: (news belgaum)ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ ಆರೋಪಿತನಿಗೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ವಿಧಿಸಿ ಘನ ನ್ಯಾಯಾಲಯ ಆದೇಶ ಹೊರಡಿಸಿದೆ. ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿ ರಾಮಪ್ಪ ಲಕ್ಷ್ಮಣ ದಂಡಿನ ಎಂಬಾತನಿಗೆ 10 ವರ್ಷ ಸಜೆ ಹಾಗೂ ₹26ಸಾವಿರ ದಂಡ ವಿಧಿಸಿದೆ. ಪ್ರಕರಣದಲ್ಲಿ ಆರೋಪಿಯೂ ಬಾಲಕಿಗೆ ವಿಷ ಕುಡಿಸಲು ಯತ್ಬಿಸಿದ್ದು ಹಾಗೂ ಬಾಲಕಿಯ ತಾಯಿಗೆ ರಾಡನಿಂದ ಹೊಡೆದು ಗಾಯಗೊಳಿಸಿದ್ದ ಬಗ್ಗೆ ಪೊಲೀಸರು ದೋಷಾರೋಪ ಸಲ್ಲಿಸಿದ್ದರು. ನ್ಯಾಯಾಧೀಶ ಜಿ. ನಂಜುಂಡಯ್ಯ ಈ ತೀರ್ಪು ಹೊರಡಿಸಿದ್ದು, ಸರಕಾರಿ ವಿಶೇಷ ಅಭಿಯೋಜಕ ಎಲ್. ವಿ. ಪಾಟೀಲ ವಾದ ಮಂಡಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.