ಉತ್ತಮ ಸಮಾಜಕ್ಕಾಗಿ

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ವಿತರಿಸಲು ಚಿಂತನೆ: HD ಕುಮಾರಸ್ವಾಮಿ

Thinking to distribute free bus pass to government school students: HD Kumaraswamy

0

ರಾಮನಗರ: (news belagaviಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ ವಿತರಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ‌‌. ಕುಮಾರಸ್ವಾಮಿ ತಿಳಿಸಿದರು‌.

News Belgaum-ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ವಿತರಿಸಲು ಚಿಂತನೆ: HD ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಸೋಮವಾರ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು‌.‌ ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಶಾಲೆಗೆ ಸೇರಿಸುವವರಿಗೆ ಉಚಿತ ಬಸ್ ಪಾಸ್ ಅಗತ್ಯ ಇಲ್ಲ‌. ವಿದ್ಯಾರ್ಥಿಗಳ ಹೋರಾಟವನ್ನು ರಾಜಕೀಯಗೊಳಿಸಿದ ಬಗ್ಗೆ ಕಿಡಿಕಾರಿದ ಅವರು ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟುಕೊಂಡು ಈ ರಾಜಕೀಯ ಮಾಡುವುದು ಬೇಡ.‌ ನನಗೆ ಅವರಿಗಿಂತ ಚೆನ್ನಾಗಿ ರಾಜಕೀಯ ಮಾಡಲು ಗೊತ್ತು ಎಂದರು.

ಈ ಕುರಿತು ಚರ್ಚಿಸಲು ನಾಳೆ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಸಭೆಯ ನಂತರ ಘೋಷಣೆ ಮಾಡುತ್ತೇನೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.