ಉತ್ತಮ ಸಮಾಜಕ್ಕಾಗಿ

ದೇಶದ ತೃತೀಯ ರಂಗದ ನಾಯಕರು ವಿಧಾನಸೌಧದ ಎದುರು ದಾಂಗುಡಿ

Third Front leaders in the country are in front of the legislative council

0

ಬೆಂಗಳೂರು:(news belagavi) ದೇಶದಲ್ಲಿ ಬಿಜೆಪಿ ವಿರುದ್ದ ಇರುವ ಎಲ್ಲ ಪಕ್ಷಗಳು ಇಂದು ಸಂಜೆ ಎಚ್. ಡಿ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದವು. ಶಕ್ತಿ ಸೌಧ ವಿಧಾನಸೌಧದ ಎದುರು ಹಾಕಲಾಗಿದ್ದ ವರ್ಣರಂಜಿತ ವೇದಿಕೆ ಮೇಲೆ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಆಡಳಿತಕ್ಕೆ ಬೆಂಗಳೂರಿಂದಲೇ ಶೆಡ್ಡು ಹೊಡೆದರು.
2006ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್ಡಿಕೆ ಒಂದು ದಶಕದ ನಂತರ ಈಗ ಬಯಸದೇ ಬಂದ ‘ಭಾಗ್ಯ’ ಎಂಬಂತೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರು.
‘ಕುಮಾರ’ನೊಂದಿಗೆ ಅಂದು ಮುನಿಸಿಕೊಂಡಿದ್ದ ಅಪ್ಪ ದೇವೆಗೌಡರು ಈ ಬಾರಿ ಸ್ವತಃ ವಿಧಾನಸೌಧಕ್ಕೆ ಕುಟುಂಬಸ್ಥರೊಂದಿಗೆ ಆಗಮಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅದೃಷ್ಟದ ಮಳೆ!:ಪ್ರಮಾಣ ವಚನಕ್ಕಿಂತ ಮುಂಚೆಯೇ ದಿಢೀರ್ ಆಗಮಿಸಿದ ಗುಡುಗು ಸಿಡಿಲಿನ ಭಾರಿ ಮಳೆ ಅಸ್ತವ್ಯಸ್ತ ಉಂಟು ಮಾಡಿತು. ಈ ವೇಳೆ ವಿಧಾನಸೌಧದ ಎದುರು ಭಾರಿ ಟ್ರಾಫಿಕ್ ಜಾಮ್ ಆಗಿ ಜನಸಾಮಾನ್ಯರು, ಅಂಬ್ಯುಲೆನ್ಸಗಳು ಹಾಗೂ ವಿಐಪಿಗಳು ಪರದಾಡಿದರು.

ಟ್ರಾಫಿಕ್ ಜಂಜಾಟ:ದೊಡ್ಡಗೌಡರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಗಣ್ಯ ಅತಿಥಿಗಳು ಟ್ರಾಫಿಕ್ ನಲ್ಲಿ ಸಿಕ್ಕುಬಿದ್ದರು.
ಡಿಕೆಶಿ ಮುನಿಸು:ಡಿಕೆಶಿ ತಮಗೆ ಡಿಸಿಎಂ ಹುದ್ದೆ ಬೇಕು ಎಂದು ರಚ್ಚೆ ಹಿಡಿದು ಆತಂಕ ಹೆಚ್ಚಿಸಿದರು. ಮನೆ ಬಾಗಿಲು ಕಾಯಲು ನಾನು ಬೇಕು, ಅಧಿಕಾರ ಇನ್ನೊಬ್ಬರಿಗಾ? ಎಂಬ ಪ್ರಶ್ನೆ ಮಾಡಿದ ಡಿಕೆಶಿ ಸಮಾಧಾನಕ್ಕೆ ನಾಯಕರು ಹರಸಾಹಸ ಪಟ್ಟರು. ಕುಮಾರಸ್ವಾಮಿ ಒಕ್ಕಲಿಗರಾಗಿದ್ದು, ಡಿಸಿಎಂ ಸ್ಥಾನ ಸಹ ಒಕ್ಕಲಿಗರದಾಗುತ್ತದೆ. ಆದ್ದರಿಂದ ನೀವು ಕೆಪಿಸಿಸಿ ಅಧ್ಯಕ್ಷರಾಗಿ ಎಂದು ಕೆ. ಸಿ. ವೇಣುಗೋಪಾಲ ಆಫರ್ ಕೊಟ್ಟರೂ ಡಿಕೆ ಸಹೋದರರು ಜಗ್ಗಲಿಲ್ಲ.
ಸೊನೀಯಾ ಗಾಂಧಿ, ರಾಹುಲ್ ಗಾಂಧಿ, ಅಖಿಲೇಶ ಯಾದವ, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಡ್ಯಾನೀಶ್ ಅಲಿ, ಪಿಣರಾಯಿ ವಿಜಯನ್, ಶರದ್ ಯಾದವ ಸೇರಿ ಇತರ ರಾಷ್ಟ್ರೀಯ ನಾಯಕರು ಭಾಗವಹಿಸಿದರು.http://tarunkranti.news

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.