ಉತ್ತಮ ಸಮಾಜಕ್ಕಾಗಿ

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ

This military place in Belgaum is quietly attracts nature lovers

0

ವಿಶೇಷ ಬರಹ: ಅಶೋಕ್ ಚಂದರಗಿ (news belagavi)  

ಮೂರ್ನಾಲ್ಕು ವರ್ಷಗಳ ಹಿಂದೆ ಊಟಿಗೆ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿಂದ ಮರಳುವಾಗ ಮಡಿಕೇರಿ, ಮೈಸೂರು ಮಾರ್ಗವಾಗಿ ಬೆಳಗಾವಿಗೆ ಬಂದಾಗ ನಾನು ನನ್ನ ಹಲವಾರು ಮಿತ್ರರಿಗೆ,” ಬೆಳಗಾವಿಯ ಸೌಂದರ್ಯದ ಮಹತ್ವ ತಿಳಿಯಬೇಕಾದರೆ ನೀವು ಹೊರಗೆ ತಿರುಗಾಡಿ ಬರಬೇಕು” ಎಂದಿದ್ದೆ.

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ- Tarun kranti
ಊಟಿಯ ನಿಸರ್ಗ ಸೌಂದರ್ಯ ನಿಮಗೆ ಗೊತ್ತಿರಬಹುದು. ಅಲ್ಲಿಂದ ಮೈಸೂರಿನ ಕೆಆರ್ ಎಸ್ ಡ್ಯಾಮ್. ಅಲ್ಲಿಯ ಸಂಗೀತ ಕಾರಂಜಿ. ಚಾಮುಂಡಿ ಬೆಟ್ಟ. ಅರಮನೆ. ಆಮೇಲೆ ಹಾಸನದಲ್ಲಿ ಅಂಥದ್ದೇನೂ ಇಲ್ಲ. ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಮೂಲಕ ಬೆಳಗಾವಿಗೆ ಬರುತ್ತೀರಿ. ಆಗ ನಿಮಗೆ ಇಲ್ಲಿಯ ಸೌಂದರ್ಯದ ಕಲ್ಪನೆ ಬರುತ್ತದೆ.!

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ- Tarun kranti 1
ಬೆಳಗಾವಿಯ ಯಾವದೇ ದಿಕ್ಕಿಗೆ ಹೋದರೂ ಹಸಿರು ಕಂಗೊಳಿಸುತ್ತದೆ. ಹಸಿರು ತುಂಬಿದ ಗಿಡಮರಗಳಿಲ್ಲದ ರಸ್ತೆಗಳೇ ಇಲ್ಲ. ಬೆಳಗಾವಿಯ ಊಟಿ ಎಂದೇ ಕರೆಯಲ್ಪಡುವ ಹನುಮಾನ ನಗರದ ಸೌಂದರ್ಯವಂತೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ನಡೆದಿದೆ.

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ- Tarun kranti 2
ಈ ಸೌಂದರ್ಯಕ್ಕೆ ಹಿಂಡಲಗಾ ರಸ್ತೆಯ ಗಣಪತಿ ದೇವಸ್ಥಾನದ ಬಳಿಯ ಸೇನೆ ನಿರ್ಮಿತ ಐದು ಕೆರೆಗಳು ಕಳಸವಿಟ್ಟಂತೆ ಆಗಿದೆ. ಕಳೆದ ಆರೆಂಟು ತಿಂಗಳಲ್ಲಿ ಸೈನಿಕರು ಯುದ್ಧೋಪಾದಿಯಲ್ಲಿ ನಿಸರ್ಗದ ಮಡಿಲಲ್ಲಿ ಐದು ಕೆರೆಗಳನ್ನು ನಿರ್ಮಿಸಿದ್ದಾರೆ. ಬರೀ ಕಟ್ಟಲಿಲ್ಲ, ಹಗಲೂ ರಾತ್ರಿ ಕಾಯುತ್ತಿದ್ದಾರೆ ಕೂಡ. ಅವುಗಳ ಸ್ವಚ್ಛತೆಯ ಕಡೆಗೂ ಗಮನ ಹರಿಸಿದ್ದಾರೆ.

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ- Tarun kranti 3
ಈ ಕೆರೆಗಳ ದಂಡೆಗುಂಟ ನಿಸರ್ಗಪ್ರಿಯರು ನಡೆದುಹೋಗಲು ಕಾಲು ದಾರಿಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಒಂದು ಕೆರೆ ತುಂಬಿದರೆ ಆ ನೀರು ಮುಂದಿನ ಕೆರೆಗೆ ಹರಿದು ಹೋಗಲು ಪೈಪ್ ಗಳನ್ನು ಅಳವಡಿಸಲಾಗಿದೆ. ಎತ್ತರದ ಪ್ರದೇಶವೂ ಹಸಿರಿನಿಂದ ಕಂಗೊಳಿಸುತ್ತಿದ್ದು ಅಲ್ಲಿಂದ ಹರಿದು ಬರುವ ನೀರೂ ಸಹ ಈ ಕೆರೆಗಳನ್ನು ಸೇರುತ್ತಿದೆ.

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ- Tarun kranti 4
ಹಿಂಡಲಗಾ ರಸ್ತೆಯ ಒಂದು ಬದಿಗೆ ಈ ತಾಣವಿದ್ದರೆ ಇನ್ನೊಂದು ಬದಿಗೆ ಹತ್ತಾರು ಎಕರೆಯಷ್ಟು ವಿಶಾಲವಾದ, ಹಸಿರು ತುಂಬಿದ ಇಳಿಜಾರು ಪ್ರದೇಶವಿದೆ. ಇಲ್ಲಿ ನಿಸರ್ಗಪ್ರಿಯರು ಕುಳಿತುಕೊಳ್ಳಲು ಅಲ್ಲಲ್ಲಿ ಆಸನಗಳನ್ನು ಕೂಡಿಸಬಹುದು. ಅಲ್ಲದೇ ಕೃತ್ರಿಮ ಜಲಪಾತವನ್ನೂ ನಿರ್ಮಿಸಬಹುದು. ಆದರೆ ಮಿಲಿಟರಿ ಸುಪರ್ದಿಯಲ್ಲಿರುವ ಈ ಪ್ರದೇಶದಲ್ಲಿ ಮಹಾನಗರ ಪಾಲಿಕೆ ಅಥವಾ ದಂಡುಮಂಡಳಿ ಇಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

ಸದ್ದಿಲ್ಲದೇ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿದೆ ಬೆಳಗಾವಿಯ ಈ ಮಿಲಿಟರಿ ತಾಣ- Tarun kranti 5
ಗಣಪತಿ ಗುಡಿಗೆ ಬರುವ ಭಕ್ತರು ಕ್ರಮೇಣ ಈ ನಿಸರ್ಗ ತಾಣದೆಡೆಗೆ ಆಕರ್ಷಿತರಾಗತೊಡಗಿದ್ದು ಸೇನೆಯ ಅಧಿಕಾರಿಗಳು ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಬೆಳಗಾವಿಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.