ಉತ್ತಮ ಸಮಾಜಕ್ಕಾಗಿ

ನಾಳೆ ರಾಷ್ಟ್ರಪತಿ ಆಗಮನ: ಸಂಚಾರ ಪೂರ್ವಾಭ್ಯಾಸ

newsw belagavi

0

ಬೆಳಗಾವಿ:(news belgaum) ದೇಶದ ಪ್ರಥಮ ಪ್ರಜೆ ಮತ್ತು ಪ್ರಥಮ ನ್ಯಾಯಾಧೀಕಾರಿ ನಾಳೆ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿ ರಿಹರ್ಸಲ್ ನಡೆಸಲಾಯಿತು.
ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ದೇಶದ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ, ಗವರ್ನರ್‌ ವಜುಭಾಯಿ ವಾಲಾ, ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಎಸ್ಕಾರ್ಟ್ ವಾಹನಗಳ ಪೂರ್ವಾಭ್ಯಾಸ ಇಂದು ನಡೆಸಲಾಯಿತು.
News Belgaum-Auto Draft 28 ಐವತ್ತಕ್ಕೂ ಹೆಚ್ಚು ವಾಹನಗಳು ನಗರದ ಕೋರ್ಟ್ ರಸ್ತೆ ಮೂಲಕ ಕಾಂಗ್ರೆಸ್ ರೋಡ್, ಉದ್ಯಮಭಾಗ ರಸ್ತೆಗಳಲ್ಲಿ ಕ್ರಮಿಸಿ ಅಭ್ಯಾಸ ಮಾಡಿಕೊಂಡರು. ನಾಳೆ ಶನಿವಾರ ಘನತೆವೆತ್ತ ರಾಷ್ಟ್ರಪತಿಗಳನ್ನು ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ.

 

 

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ. 15 ರಂದು ಸುವರ್ಣ ವಿಧಾನಸೌಧದಲ್ಲಿ ನಡೆಸಲಿರುವ ಜನತಾದರ್ಶನದ ಸಿದ್ಧತೆ.

Leave A Reply

 Click this button or press Ctrl+G to toggle between Kannada and English

Your email address will not be published.