ಉತ್ತಮ ಸಮಾಜಕ್ಕಾಗಿ

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು

Tourists places are attracting at the Paravda, Chikala, Chushhe and Kanapura Taluk in Sural Falls.

0

ಕಾಶೀಮ ಹಟ್ಟಿಹೊಳಿ, ಖಾನಾಪುರ

ಖಾನಾಪುರ: (news belagaviತಾಲೂಕಿನ ಕಣಕುಂಬಿ ವಲಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಬರುವಂತದ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಖಾನಾಪುರದಿಂದ 38 ಹಾಗು ಬೆಳಗಾವಿ ಜಿಲ್ಲಾ ಕೇಂದ್ರದಿಂದ 40 ಕಿ ಮೀ ಅಂತರದಲ್ಲಿರುವ ಕಣಕುಂಬಿಯು ಪಶ್ಚಿಮ ಘಟ್ಟದ ನಿತ್ಯ ಹಿರಿದ್ವರ್ಣದ ಅರಣ್ಯ ಪ್ರದೇಶವನ್ನು ಹೊಂದಿದೆ. ಎಲ್ಲಿ ನೋಡಿದರು ಹರಿಸಿನಿಂದ ಕಂಗೋಳಿಸುವ ಕಾಡು ಕಣಕುಂಬಿ ಸುತ್ತಮುತ್ತಲಿರುವ ಅರಣ್ಯ ಪ್ರದೇಶದಲ್ಲಿ ಬರುವ ಜಲಪಾತಗಳು ಹಾಗು ಅರಣ್ಯ ಪ್ರದೇಶಅಕ್ಷಯ ಹಸಿರು ಮಳೆ ಹನಿಗಳಿಂದಾಗಿ ಹೋಸತನದಿಂದ ಕಂಗೋಳಿಸುತ್ತಿದೆ.

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು- Tarun kranti
ಕಣಕುಂಬಿಯಿಂದ 5 ಕಿ ಮೀ ಅಂತರದಲ್ಲಿರುವ ಚುಗಿಳೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಸಿರಿನ ಸಾಗರದ ನಡುವೆ ಕೆಲ ಕಾಲ ಮಂಜು ಮುಸಿಕಿ ಸ್ವರ್ಗವೇ ದರೆಗಿಳಿಂದತೆ ಭಾಸವಾಗುತ್ತದೆ. ಇಲ್ಲಿನ ಸೋಬಗು ಸವಿಯನ್ನು ಸವಿಯಲು ಬೆಳಗಾವಿ ಜಿಲ್ಲೆ ಹಾಗು ಕರ್ನಾಟಕ ಮಹಾರಾಷ್ಟ್ರ ಹಾಗು ಗೋವಾ ರಾಜ್ಯದ ಪ್ರವಾಸಿಗರು ನಿಸರ್ಗವನ್ನು ಸವಿಯಲು ತಂಡೂಪವಾಗಿ ತಂಡ ಹರಿದು ಬರುತ್ತಿದೆ.

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು- Tarun kranti 1

ಕಣಕುಂಬಿ ಗ್ರಾಮದ ಹತ್ತಿರ ಪಾರವಡ ಹಾಗು ಚಿಕಲಾ ಫಾಲ್ಸ್ (ಜಲಪಾತ) ಕಣಕುಂಬಿ ಗ್ರಾಮದಿಂದ ಕೇವಲ 5 ಕಿ ಮೀ ಅಂತರದಲ್ಲಿರುವ ಪಾರವಾಡ ಅರಣ್ಯ ಪ್ರದೇಶದಲ್ಲಿ ಬರುವಂತದ ಈ ಜಲಪಾತವನ್ನು ತಲುಪಲು ಕಣಕುಂಬಿ ಗ್ರಾಮದಿಂದ ಒಳಗೆ ಹಾದು ಜಲಪಾತವನ್ನು ತಲುಪಲು ರಸ್ತೇಗಳನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೇಯು ಪಾರವಾಡ ಗ್ರಾಮದ ಮೂಲಕ ಹಾಯ್ದು ಜಲಪಾತವನ್ನು ಕೆಲವೇ ಅಂತರದಲ್ಲಿ ತಲುಪತದೆ. ಈ ಜಲಪಾತವನ್ನು ತಲುಪಲು ಕಾರು ಹಾಗು ದ್ವಿಚಕ್ರ ವಾಹನಗಳ ಮೂಕಾಂತರ ತಲುಪಬಹುದು. ಪಾರವಾಡ ಜಲಪಾತವು ನೀರು ಮೇಲಿನಿಂದ ಆಳವಾದ ಪ್ರತಾಪಕ್ಕೆ ಶುಭ್ರವಾದ ನೀರು ರಭಸವಾಗಿ ಹರಿದು ಕೇಳಗೆ ಬಿಳುವುದರಿಂದ ದೃಶ ನೋಡುಗರ ಕಣ್ಣಿಗೆ ನಯನ ಮನೋಹರ. ಈ ಜಲಪಾತವನ್ನು ತಲುಪುವಾಗ ಈ ಅರಣ್ಯ ಪ್ರದೇಶದಲ್ಲಿ ಅನೇಕ ಸಣ್ಣ ಸಣ್ಣ ಜಲಪಾತಗಳು ಕಂಡು ಬರುತ್ತವೆ. ಈ ಪಾರವಾಡ ಫಾಲ್ಸವನ್ನು ಬೆಳಗಾವಿ ಸುತ್ತ ಮುತ್ತಲಿನ ಕಾಲೇಜ್ ವಿದ್ಯಾರ್ಥಿಗಳು ಯುವ ಜೋಡಿಗಳು ಹರಿದು ಬರುತ್ತಿವೆ.

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು- Tarun kranti 4
ಕಣಕುಂಬಿ ಮಾವುಲಿ ದೇವಸ್ಥಾನ ಹಾಗು ಮಲಪ್ರಭಾ ನದಿ ಉಗಮ ಸ್ಥಾನ ಖಾನಾಪುರದಿಂದ 38 ಕಿ ಮೀ ಹಾಗು ಬೆಳಗಾವಿ ಜಿಲ್ಲಾ ಕೇಂದ್ರದಿಂದ 40 ಕಿ ಮೀ ಅಂತರದಲ್ಲಿರುವ ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಮಲಪ್ರಭಾ ನದಿಯು ಉಗಮ ಹೊಂದಿರುತ್ತದೆ. ಈ ಉಗಮ ಹೊಂದಿದ ನದಿಯ ಮೂಲ ಸ್ಥಾನ ನೋಡಲು ಕಣಕುಂಬಿ ಮಾವುಲಿ ದೇವಸ್ಥಾನದ ಹಿಂದುಗಡೆ ಕಂಡು ಬರುತ್ತದೆ. ಈ ಮಲಪ್ರಭಾ ನದಿ ಉಗಮ ಹೊಂದುವ ಅರಣ್ಯ ಪ್ರದೇಶ ನೋಡುಗರ ಕಣ್ಮಮನ್ ಸೇಲುತ್ತದೆ.

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು- Tarun kranti 5

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು- Tarun kranti 6

ಕಣಕುಂಬಿ ಗ್ರಾಮದ ಚುಗಳಾ ರಸ್ತೇಯಲ್ಲಿ ಕಣಕುಂಬಿ ಅರಣ್ಯ ಪ್ರದೇಶದ ಹತ್ತಿರ ನಿಸರ್ಗದ ಸ್ವಭಗಿನತಪ್ಪಲು ಪ್ರದೇಶಗಳಲ್ಲಿ ಪುರಾತನ ಮಾವುಲಿ ದೇವಸ್ಥಾನವಿದೆ. ಈ ಪುರಾತನ ದೇವಸ್ಥಾನ ನೋಡಲು ಸುಂದರವಾಗಿದೆ. ಅದರ ಎದುರುಗಡೆ ಪ್ರವಿತ್ರವಾದ ಮಲಪ್ರಭಾ ನದಿಯ ಹೊಂಡವಿದೆ.

ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿರುವ ಖಾನಾಪುರ ತಾಲೂಕಿನ ಪಾರವಾಡ, ಚಿಕಲಾ, ಚುಗಳೆ ಹಾಗು ಸುರಲ್ ಫಾಲ್ಸ್ ಗಳು- Tarun kranti 7
ಚಿಗುಳೆ ಗ್ರಾಮದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ಶ್ರೇಣಿಯ ವಿಹಂಗಮ ನೋಟ:ಚಿಗುಳೆ ಮಾವುಲಿ ದೇವಸ್ಥಾನ ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟದ ಗೋವಾ ಹಾಗು ಮಹಾರಾಷ್ಟ್ರ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೋನೆಯ ಗ್ರಾಮ ಚಿಗುಳೇ ಕಣಕುಂಬಿ ಗ್ರಾಮದಿಂದ ಕೇವಲ 5 ಕಿ ಮೀ ಅಂತರದಲ್ಲಿರುವ ಈ ಪ್ರದೇಶವನ್ನು ತಲುಪಲು ದ್ವಿಚಕ್ರ ಹಾಗು ಕಾರುಗಳಿಗೆ ರಸ್ತೇ ಸಂಪರ್ಕವಿದೆ. ಸಮುದ್ರ ಮಟ್ಟದಿಂದ 900ಮೀ. ಎತ್ತರ ಪದೇಶದಲ್ಲಿರುವ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಶೇಣಿಯ ಸೌಂದರ್ಯವನ್ನು ಸವಿಯಲು ತುಂಬಾ ಸಂತೋಷವೇನಿಸುತ್ತದೆ. ಕರ್ನಾಟಕ ರಾಜ್ಯದ ಗಡಿ ಭಾಗದ ಈ ಕೋನೆಯ ಗ್ರಾಮದಲ್ಲಿ ಪರಿಸರ ಬೆಟ್ಟ ಶೇಣಿಗಳನ್ನು ನೋಡಲು ವಿಕ್ಷಣೆಯ ಸ್ಥಳಗಳನ್ನು ನಿರ್ಮಾಣ ಮಾಡಲಾಗಿದೆ. ಈ ಗ್ರಾಮದ ಎತ್ತರದ ಸ್ಥಳದಿಂದ ನೋಡಿದರೆ ಎಡಭಾಗಕ್ಕೆ ಗೋವಾ ರಾಜ್ಯ ಬೆಟ್ಟ ಶೇಣೀಗಳೂ ಹಾಗು ಬಲಭಾಗಕ್ಕೆ ಮಹಾರಾಷ್ಟ್ರ ರಾಜ್ಯದ ಬೆಟ್ಟ ಶೇಣೀಗಳು ಮಂಜುಕವಿದ ವಾತಾರಣದಲ್ಲಿ ರಮನೀಯವಾಗಿ ಕಾಣುತ್ತವಿ. ಈ ಬೆಟ್ಟದ ಕೆಳಗಡೆ ಮಂಜುಕವಿದ ವಾತಾವರಣವಿಲ್ಲದಿಂದರೆ ಮಹಾರಾಷ್ಟ್ರದ ಕಿಲಾರಿ ಡ್ಯಾಂನ ವಿಂಹಗಮ ನೋಡ ಸವಿಯಲುದೋರೆಯತ್ತದೆ.

ಕರ್ನಾಟಕ ರಾಜ್ಯದ ಗಡಿಭಾಗದ ಕಣಕುಂಬಿಯಿಂದ 8 ಅತಂರದಲ್ಲಿರುವ ಗೋವಾ ರಾಜ್ಯದಲ್ಲಿ ಬರುವ ಸುರಲ್ ಫಾಲ್ಸ್ ಕರ್ನಾಟಕದ ಕಟ್ಟಕಡೆ ಹಾಗು ಗೋವಾ ರಾಜ್ಯದ ಗಡಿಭಾಗದ ಹಳ್ಳಿ ಸುರಲ್. ಈ ಗ್ರಾಮ ಪಣಜಿ ಬೆಳಗಾವಿ ರಾಜ್ಯ ಹೆದ್ದಾರಿ ಚೋರ್ಲಾ ಘಾಟ ಮೇಲೆ ಬರುತ್ತದೆ. ಈ ಸ್ಥಳವನ್ನು ತಲುಪಲು ವಾಹನಗಳು ಹೋಗುತ್ತವೆ. ಸುರಲ್‍ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಜಲಪಾತ ಸುರಲ್ ಫಾಲ್ಸ್. ಸುರಲ್ ಜಲಪಾತ ಚಿಕಲಾ ಅರಣ್ಯ ಪ್ರದೇಶದಲ್ಲಿರುವ ಮಹಾದಾಯಿ ನೀರು ಹರಿದು ಚಿಕಲಾ ಅರಣ್ಯ ಪ್ರದೇಶದಿಂದ ಸುರಲ್‍ ಅರಣ್ಯ ಪ್ರದೇಶದ ಪ್ರಾತಾಪದಲ್ಲಿ ಹಾಲುನೋರೆಯಂತೆ ಬಿಳುವ ಈ ಜಲಪಾತದ ವಿಂಹಗಮ ನೋಟವನ್ನು ನೋಡಲು 2 ಕಣ್ಣುಗಳು ಸಾಲದು. ಕಳೆದ 4 ದಿನಗಳಿಂದ ಕಣಕುಂಬಿ ಹಾಗೂ ಚಿಕಲಾ ಮಹಾದಾಯಿ ಪ್ರದೇಶದಲ್ಲಿ ಸತತ ಮಳಯಾಗುತ್ತಿರುವುದರಿಂದ ಈ ಜಲಪಾತ ತುಂಬಿ ಹರಿಯುತ್ತಿದೆ. ಈ ಚೋರ್ಲಾ ಘಾಟ ಮಾರ್ಗದಲ್ಲಿ ಅನೇಕ ಸಣ್ಣ ಸಣ್ಣ ಜಲಪಾತಗಳು ಕಂಡುಬರುತ್ತಿವೆ. ಈ ಮಳೆ ಪ್ರಾಂರಭವಾಗಿರುವಂದರಿಂದ ಇಲ್ಲಿನ ಮೋಡಕವಿದ ವಾತಾವರಣದ ಶೇಣಿಯ ವಿಂಹಗಮನ್ ನೋಡ ಪ್ರವಾಸಿಗರನ್ನು ಕೈಬಿಸಿ ಕರಿಯುತ್ತಿದೆ. ಈ ನಿಸರ್ಗದ ಸವಿಯನ್ನು ಸವಿತ್ತಿರುವಾಗ ಸಮಯ ಹೊಂದದೆಗೋತ್ತಾಗುವದಿಲ್ಲ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.