ಉತ್ತಮ ಸಮಾಜಕ್ಕಾಗಿ

news belgavi:ಗ್ರಾಮೀಣದಲ್ಲಿ ತ್ರಿಕೋಣ ಸ್ಪರ್ಧೆ ಉಂಟು ಮಾಡಿದೆ.

Trine competition in rural areas.

0

ಬೆಳಗಾವಿ:(news belgaum ) ಕಾಂಗ್ರೆಸನಲ್ಲಿ ಸಿಗದ ಸೂಕ್ತ ಸ್ಥಾನಮಾನದ ನೋವಿನ ಹಿನ್ನಲೆಯಲ್ಲಿ ತಿಂಗಳ ಹಿಂದೆ ಜೆಡಿಎಸ್ ಗೆ ಹೋಗಿದ್ದ ಶಿವನಗೌಡ ಪಾಟೀಲ ಈಗ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಸ್ಪರ್ಧಿಸಲಿದ್ದಾರೆ‘ಹಣಬಲದ ಮುಂದೆ, ಜನಬಲದ ಹೋರಾಟ’ಧ್ಯೇಯ ವಾಕ್ಯದಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಮೂಲ ಕಾರ್ಯಕರ್ತರಾಗಿದ್ದ ಸದ್ಯ ಜೆಡಿಎಸ್ ಹುರಿಯಾಳು ಶಿವನಗೌಡ ಪಾಟೀಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಣಿಯಾಗಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಟಿಕೇಟ್ ಘೋಷಣೆ ಮಾಡಿರುವುದು ಗ್ರಾಮೀಣದಲ್ಲಿ ತ್ರಿಕೋಣ ಸ್ಪರ್ಧೆ ಉಂಟು ಮಾಡಿದೆ.- Tarun kranti 15
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಹಿಂದೆ MP& MLA ಎಲೆಕ್ಷನ್ ಎದುರಿಸಿ ಪರಾಭವಗೊಂಡ ಲಕ್ಷ್ಮೀ ಹೆಬ್ಬಾಳಕರ ಈ ಬಾರಿ ಪ್ರಬಲ ಸ್ಪರ್ಧೇಗೆ ತಯಾರಿ ನಡೆದಿರುವ ಮಧ್ಯೆ ಮಾಜಿ ಸ್ವಪಕ್ಷೀಯ ನೇತಾರ ಪ್ರತಿಪಕ್ಷದ ಟಿಕೇಟ್ ಪಡೆದು ಎದುರು ನಿಲ್ಲುತ್ತಿರುವುದು ಲಕ್ಷ್ಮೀ ಗೆ ನುಂಗಲಾರದ ತುತ್ತಾಗಿದೆ. ಈ ಮಧ್ಯೆ ಬಿಜೆಪಿಯ ಹಾಲಿ ಶಾಸಕ ಸಂಜಯ ಪಾಟೀಲ ಸಹ ತಮ್ಮ ಸ್ವ- ಪ್ರಯತ್ನದ ನಡುವೆ ಪಕ್ಷದ ಓಟ್ ಸಹ ಗಿಟ್ಟಿಸಿಕೊಳ್ಳುವುದು ಸಹಜ. ಕಾಂಗ್ರೆಸ್& ಬಿಜೆಪಿ ಬಗ್ಗೆ ಎಲ್ಲoದರಲ್ಲಿ ಅಸಹನೆ ನಡೆ ಕಾಣಿಸುತ್ತಿರುವುದು ಮತ್ತು ಹೊಸ ಮುಖಗಳ ಬಗ್ಗೆ ಜನರಿಗೆ ಆಸ್ಥೆ ಇರುವುದು ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಲಾಭವಾಗುವ ನಿರೀಕ್ಷೆ ಇದ್ದು; ಕೊನೆಪಕ್ಷ ಮತ ವಿಂಗಡನೆ ಆಗುವುದು ಪಕ್ಕಾ ಎಂಬ ಚರ್ಚೆ ಗರಿಗೆದರಿದೆ.
ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಶಿವನಗೌಡ ಪಾಟೀಲ ಏಕಾಏಕಿ ಮುನಿಸಿಕೊಂಡು ಜೆಡಿಎಸ್ ಸೇರಿ ಈಗ ಹೆಬ್ಬಾಳಕರ ವಿರುದ್ಧ ಚುನಾವಣಾ ಕಣಕ್ಕೆ ಇಳಿದಿರುವುದು ರಣನೀತಿ (Preplanned) ಎನ್ನಲಾಗುತ್ತಿದೆ. ಜನರ ಅಸಹನೆಗೆ ಒಳಗಾಗಿರುವ ಕಾಂಗ್ರೆಸ್ ಬಿಜೆಪಿ ಪಕ್ಷಗಳ ನಡುವೆ Phoenix ಪಕ್ಷಿಯಂತೆ ಜೆಡಿಎಸ್ ಅಕೌಂಟ್ ತೆರೆಯುವ ಮಾತುಗಳು ಕೇಳಿಬರುತ್ತಿವೆ. ಲಕ್ಷ್ಮೀ ಹೆಬ್ಬಾಳಕರ ಆಯ್ಕೆಯಾಗದಂತೆ ನೋಡಿಕೊಳ್ಳಲು ಒಂದು ಬಣ ಸತತ ಪ್ರಯತ್ನ ನಡೆಸಿದ್ದು ಇದು ಅರಿಕೆಗೆ ಬಾರದ ವಿಚಾರವಲ್ಲ. ಶಾಸಕ ಸಂಜಯ ಪಾಟೀಲ ಮತ್ತು ಲಕ್ಷ್ಮೀ ಹೆಬ್ಬಾಳಕರ ನಡುವಿನ ರಾಜಕೀಯ ಜಟಾಪಟಿ ನಡುವೆ ಈಗಶಿವಉದ್ಭವಿಸಿದ್ದಾನೆ. ಜನರಿಂದ ಆಯ್ಕೆಯಾಗಲು ಜೆಡಿಎಸ್ ಬಿಡುಗಡೆ ಮಾಡಿದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶಿವನಗೌಡ ಪಾಟೀಲ ಯಾವೆಲ್ಲ ಆಡಳಿತಾತ್ಮಕ ನಡೆಯ ಪ್ಲಾನ್ ಹೊಂದಿದ್ದಾರೆ ಎಂಬುವುದು ಇನ್ನಷ್ಟೇ ಗ್ರಾಮೀಣ ಕ್ಷೇತ್ರದ ಜನರ ಮುಂದೆ ಪ್ರಚುರಪಡಿಸಬೇಕಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ನಡುವಿನ ರಣಕಣವಾಗಿ ಮಾರ್ಪಟ್ಟಿದೆ. ಸಿದ್ದು-ಕುಮಾರ-ಯಡ್ಡಿ ಮೂವರ ಪ್ರಚಾರ ಭರಾಟೆಯೂ ಈ ಸೂಕ್ಷ್ಮ ಕ್ಷೇತ್ರದ ಮೇಲೆ ಪ್ರಾರಂಭವಾಗುವುದು ಸಮೀಪಿಸುತ್ತಿದೆ. ‘ಲಕ್ಷ್ಮೀ’ ಗೆ ಟಾಂಗ್ ನೀಡಲೆಂದೆ ‘ಶಿವ’ ನಿಗೆ ಅನ್ಯ ಪಕ್ಷದಿಂದ ಟಿಕೇಟ್ ಕೊಡಿಸಲಾಯಿತು ಎನ್ನಲಾಗುತ್ತಿದೆ.Trine competition in rural areas.

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.