ಉತ್ತಮ ಸಮಾಜಕ್ಕಾಗಿ

ರೋಚಕ ಗೆಲವು ಸಾಧಿಸುವ ಮೂಲಕ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ.

Tropi acquires a tremendous win.

0

ಬೆಳಗಾವಿ 🙁news belgaum) ನಗರದ ವ್ಯಾಕ್ಸಿನ್ ಡೆಪೆÇದ ಲೆಲೇ ಆಟದ ಮೈದಾನದಲ್ಲಿ ರವಿವಾರ ದಿ. 25ರಂದು ನಡೆದ ಮೇಯರ್ ಟ್ರೋಪಿ (ಕಪ್) 2017_18 ಸಾಲಿನ ಕ್ರಿಕೇಟ ಪಂದ್ಯಾವಳಿಯಲ್ಲಿ (ಪ್ರೆಸ್ ಎಲೆವನ್ ಬಿ) ಬೆಳಗಾವಿ ಪತ್ರಕರ್ತರ ಬಿ ತಂಡವು ಪೈನಲ್ ಪಂದ್ಯದಲ್ಲಿ ರೋಚಕ ಗೆಲವು ಸಾಧಿಸುವ ಮೂಲಕ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ.
ರವಿವಾರ ಬೆಳಗಿನಿಂದ ಲೆಲೇ ಮೈದಾನದಲ್ಲಿ ತುರಿಸಿನ ಕ್ರಿಕೇಟ್ ಪಂದ್ಯಗಳು ನಡೆದಿದ್ದು, ಪಂದ್ಯಾವಳಿಯ ಉದ್ಘಾಟನೆಯ ನಂತರ ರೋಚಕ ಗೆಲವು ಸಾಧಿಸುವ ಮೂಲಕ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ.- Tarun krantiಪ್ರಥಮ ಸುತ್ತಿನ ಮೊದಲನೇಯ ಪಂದ್ಯವು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡ ಮತ್ತು ಪ್ರೆಸ್ ಎಲೆವನ್ ಎ ತಂಡಗಳ ಮಧ್ಯ ನಡೆದು ಕೊನೆಯಲ್ಲಿ ಪಾಲಕೆ ಅಧಿಕಾರಿಗಳ ತಂಡವು 1 ರನ್ನನಿಂದ ರೋಚಕ ವಿಜಯ ಸಾಧಿಸಿತು.
ಬಳಿಕ ನಡೆದ ಎರನೇಯ ಪಂದ್ಯದಲ್ಲಿ ಪ್ರೆಸ್ ಎಲೆವನ್ ಬಿ ತಂಡ ಹಾಗೂ ಆದಾಯ ತೆರಿಗೆ(ಇನ್‍ಕಂ ಟ್ಯಾಕ್ಸ್) ಅಧಿಕಾರಿಗಳ ತಂಡಗಳ ಮಧ್ಯ ನಡೆದ ಪಂದ್ಯದಲ್ಲಿ ಪ್ರೆಸ್ ಎಲೆವನ್ ಬಿ ತಂಡವು ಅಮೋಘ ಜಯ ಸಾಧಿಸಿತು. ಪಾಲಿಕೆಯ ನಗರಸೇವಕರ ತಂಡವು ಮೊದಲನೇಯ ಸುತ್ತಿನಲ್ಲಿಯೇ ಸೋಲನ್ನು ಅನುಭವಿಸಿ ಪಂದ್ಯಾವಳಿಯಿಂದ ಹೋರಗುಳಿಯಿತು.
ಹಲವು ಪಂದ್ಯಗಳನ್ನು ಆಡಿದ ಪ್ರೆಸ್ ಎಲೆವನ್ ಬಿ ತಂಡವು ಪೈನಲ್ ಪ್ರವೇಶ ಮಾಡಿ ಪೈನಲ್‍ನಲ್ಲಿ ಪ್ರತಿಸ್ಪರ್ಧೆಯೊಡ್ಡಿದ್ದ ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ್ ಕುರೇರ್ ಅವರ ನೇತೃತ್ವದ ಅಧಿಕಾರಿಗಳ ತಂಡದ ವಿರುದ್ದ (ಬೆಳಗಾವಿ ಪತ್ರಕರ್ತರ ಬಿ) ಪ್ರೆಸ್ ಎಲೆವನ್ ಬಿ ತಂಡವು ಅಂತರದ ಅಮೋಘ ಜಯ ಸಾಧಿಸುವ ಮೂಲಕ ಮೇಯರ್ 2017_18 ಸಾಲಿನ ಕ್ರಿಕೇಟ ಪಂದ್ಯದ ಕಪ್‍ನ್ನು ತನ್ನ ಮುಡಿಗೇರಿಸಿಕೊಂಡಿತು.
ಅದರಂತೆ ಎಲ್ಲ ಪಂದ್ಯಗಳಲ್ಲಿ ಉತ್ತಮ ಬಾಲಿಂಗ್ ಮಾಡುವ ಮೂಲಕ ಅತಿ ಹೆಚ್ಚು ವಿಕೇಟಗಳನ್ನು ಪಡೆದ ಪತ್ರಕರ್ತ ಪಾರೇಶ ಭೋಸಲೆ ಅವರಿಗೆ ಮ್ಯಾನ್ ಆಫ್ ದಿ ಸಿರೀಜ್( ಸರಣಿ ಪುರುಷ) ಎಂದು ಘೋಷಿಲ್ಪಟ್ಟರು.
ಬಳಿಕ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬೆಳಗಾವಿ ಪಾಲಿಕೆ ಮಹಾಪೌರ ಸಂಜೋತಾ ಬಾಂದೇಕರ್ ಹಾಗೂ ಉಪಮಹಾಪೌರ ನಾಗೇಶ ಮಂಡೋಳಕರ್, ಆಯುಕ್ತ ಶಶಿಧರ ಕುರೇರ, ಮಾಜಿ ಮಹಾಪೌರ ಮಹೇಶ ನಾಯಿಕ ಇವರು ಕಪ್ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಎಲ್ಲ ನಗರ ಸೇವಕರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.