ಉತ್ತಮ ಸಮಾಜಕ್ಕಾಗಿ

ಉದ್ಯಮಭಾಗ ರಸ್ತೆ ನೆಡುತೋಪು: APCCF ಅಜಯ ಮಿಶ್ರಾ ಹರ್ಷ

Udyamabag Road Plantation: APCCF Ajay Mishra excited

0

ಬೆಳಗಾವಿ: (news belagaviನಗರ ಹಸಿರೀಕರಣ ಯೋಜನೆಯಡಿ, ಬೆಳಗಾವಿಯಲ್ಲಿ ನೆಡಲಾದ ಮಳೆಗಾಲದ ನೆಡುತೋಪು ವೀಕ್ಷಿಸಿ ರಾಜ್ಯ APCCF (Development) ಅಜಯ ಮಿಶ್ರಾ ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿಗೆ ಭೇಟಿ ನೀಡಿದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ನಗರದ ಕಾಂಗ್ರೆಸ್ ರಸ್ತೆ ಹಾಗೂ ಉದ್ಯಮಭಾಗ ರಸ್ತೆಯಲ್ಲಿ ಸಸೀಕರಣದ ಪರಿಶೀಲನೆ ನಡೆಸಿದರು.

ಉದ್ಯಮಭಾಗ ರಸ್ತೆ ನೆಡುತೋಪು: APCCF ಅಜಯ ಮಿಶ್ರಾ ಹರ್ಷ- Tarun kranti
ನಗರದ ಮೂರನೇ ರೈಲ್ವೇ ಗೇಟನಿಂದ ಝಾಡ ಶಹಾಪುರವರೆಗೆ ಸುಮಾರು ಮೂರು ಕಿಮೀ. ವ್ಯಾಪ್ತಿಯಲ್ಲಿ ನೆಡಲಾದ 900 ಗಿಡಗಳ ಪರಿವೀಕ್ಷಣೆ ಅಜಯ ಮಿಶ್ರಾ ಇಂದು ಕೈಗೊಂಡರು. ನೂತನ ರಸ್ತೆಯ ಉದ್ದಕ್ಕೂ ಚೀಲದಲ್ಲಿ ನೆಟ್ಟು ಬೆಳೆಸಲಾದ ಗಿಡಗಳನ್ನು ಅರಣ್ಯ ಇಲಾಖೆಯಿಂದ ನೆಡಲಾಗಿದ್ದು, ನಗರ ದಕ್ಷಿಣ ಶಾಸಕ ಅಭಯ ಪಾಟೀಲ & ಕೈಗಾರಿಕೋದ್ಯಮಿಗಳು ಅವುಗಳ ಪಾಲನೆ ಪೋಷಣೆ ಜವಾಬ್ದಾರಿ ಹೊತ್ತಿದ್ದಾರೆ. ಉದ್ಯಮಭಾಗ ಕೈಗಾರಿಕೆ ಕ್ಷೇತ್ರದ ಉದ್ಯಮಿಗಳು ತಮಗೆ ಶಿಕ್ಷಣ ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರಿನಲ್ಲಿ ಪ್ರತಿ ಗಿಡದ ಪಾಲನೆ ನೋಡಿಕೊಳ್ಳಲಿದ್ದಾರೆ.

ಗ್ರಾಮೀಣ ರಸ್ತೆ ಸಸೀಕರಣ ಕ್ಷೇತ್ರಗಳಿಗೆ ಭೇಟಿ ನೀಡಿದ ಎಪಿಸಿಸಿಎಫ್ ಮಿಶ್ರಾ, ಖಾದರವಾಡಿಯಿಂದ ಮಂಡೊಳ್ಳಿ ರಸ್ತೆಯ ಸುಮಾರು 3 ಕೀಮಿ. ವ್ಯಾಪ್ತಿಯಲ್ಲಿನ ನೆಡಲಾದ ಆಲ, ಬಸರಿ, ಪಾಗೆ, ನೇರಳೆ & ಬೇವು 1200 ಗಿಡಗಳನ್ನು ವೀಕ್ಷಿಸಿದರು. ಚೀಲದಲ್ಲೇ ಸಸಿಗಳನ್ನು ಬೃಹದಾಕಾರವಾಗಿ ಬೆಳೆಸಿ ನಂತರ ಹಸಿರೀಕರಣಕ್ಕೆ ಇಳಿದ ಬೆಳಗಾವಿ ಅರಣ್ಯ ವಿಭಾಗದ ಬಗ್ಗೆ ಮಿಶ್ರಾ ಸಂತಸ ವ್ಯಕ್ತಪಡಿಸಿದರು. ಬೆಳಗಾವಿ ನಗರದಲ್ಲಿ ಹೆಚ್ಚಿನ ಗಿಡಮರ ನೆಟ್ಟು ಹಸಿರೀಕರಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉತ್ತಮ ಮಾನ್ಸೂನ್ ಸಹ ಹಸಿರೀಕರಣಕ್ಕೆ ಪೂರಕವಾಗಲಿದೆ ಎಂದು ಎಪಿಸಿಸಿಎಫ್ ಆಶಯ ವ್ಯಕ್ತಪಡಿಸಿದರು.

ACF ಸಂಗೊಳ್ಳಿ, RFO ಮನೋಹರ ಶ್ರೀಕಾಂತ ಕಡೋಲಕರ, ಸಾಮಾಜಿಕ ಅರಣ್ಯ ವಿಭಾಗದ ಎಸಿಎಫ ಖನದಾಳೆ, ಆರ್ ಎಫ್ ಓ ಹೊನ್ನಮನೆ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.