ಉತ್ತಮ ಸಮಾಜಕ್ಕಾಗಿ

ನಗರ ರಸ್ತೆಗಳು ಕೆಡಲು ಅಧಿಕಾರಿ & ಗುತ್ತಿಗೆದಾರರು ಕಾರಣ: ಸುಮ್ಮನೆ ಬಿಡೇವು

Urban Roads are bad Due to Officers & Contractors: We can't Leave them

0

ಬೆಳಗಾವಿ:  (news belagaviಸಂಪೂರ್ಣ ಅವೈಜ್ಞಾನಿಕ ಸಬೂಬು ಹೇಳುತ್ತ ನಗರದ ರಸ್ತೆಗಳು ಕೆಡಲು ಕಾರಣರಾದ ಅಧಿಕಾರಿಗಳು ಈಗ ನುಣುಚಿಕೊಳ್ಳುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ ಎಂದು ನಗರದ ಶಾಸಕದ್ವಯರು ಎಚ್ಚರಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ & ಅನಿಲ ಬೆನಕೆ ಅವರು ಯಾವುದೇ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲು ಮುಂದಾಗದ ಅಧಿಕಾರಿಗಳು ಕಳಪೆ ಕಾಮಗಾರಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಠ ಎಂದು ಅಭಯ ಪಾಟೀಲ ಕಿಡಿಕಾರಿದರು.

ಮಹಾದ್ವಾರ ರಸ್ತೆ, ಕಾಂಗ್ರೆಸ್ ರಸ್ತೆ ಇತ್ತೀಚೆಗೆ ಮಾಡಿದವೇ ಕಿತ್ತೆದ್ದು ಹೋಗಿವೆ‌. ಯಾವುದೇ ನಿರ್ಮಿತ ರಸ್ತೆಗಳ ಕ್ವಾಲಿಟಿ ಪರಿಶೀಲನೆ ಆಗಿಯೇ ಇಲ್ಲ. ರಸ್ತೆ ನಿರ್ಮಿಸಿದ ಗುತ್ತಿಗೆದಾರನಿಗೆ ರಸ್ತೆ ವ್ಯವಸ್ಥಾಪನಾ(Mantainance) ಒಪ್ಪಂದವನ್ನು ಪಾಲಿಕೆ ಮತ್ತು ಇತರ ಅಧಿಕಾರಿಗಳು ಮಾಡಿಕೊಂಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ ದಕ್ಷಿಣ ಕ್ಷೇತ್ರ ಬೇಕು, ಉತ್ತರ ಕ್ಷೇತ್ರ ಹದಗೆಟ್ಟು ಹೋಗಿದೆ ಎಂದು ಖೇದ ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆಯ ಮುನ್ನವೇ ಗಡಬಡಿಯಲ್ಲಿ ಟೆಂಡರ್ ಕರೆದು ಮಾಡಿದ ರಸ್ತೆಗಳು ಈಗ ಹಾಳಾಗಿವೆ. ಅಧಿಕಾರಿಗಳು ಮತ್ತು ಮಾಜಿ ಶಾಸಕ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು. ಸರಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭಾರಿ ಪ್ರಮಾಣದಲ್ಲಿ ಕೋಟ್ಯಾಂತರ ಭ್ರಷ್ಟಾಚಾರ ಮಾಡಿದ್ದಾರೆ. ಭಾರಿ ಮಳೆ ಕಾರಣದಿಂದ ನಗರದ ರಸ್ತೆಗಳು ಹಾಳಾಗಿವೆ ಎನ್ನುತ್ತಿರುವ ಅಧಿಕಾರಿಗಳು & ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ ಗೆ ಸೇರಿಸದಿದ್ದರೆ ಸುಮ್ಮನೆ ಬಿಡಲ್ಲ ಎಂದು ಶಾಸಕದ್ವಯರು ಅಬ್ಬರಿಸಿದ್ದಾರೆ.

ಸೊಳ್ಳೆ ಸಾಯಲು ಫಾಗಿಂಗ್ ಮಾಡುತ್ತಿದ್ದಾರೊ ಇಲ್ಲವೇ ಓಡಿಸಲೊ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಜನರು ಗೋಗರೆದರೂ ಕೇಳದ ಅಧಿಕಾರಿಗಳು ಸೊಳ್ಳೆ ಸಾಯದಂತಹ ಫಾಗಿಂಗ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ರಸ್ತೆ ನಿರ್ಮಾಣಕ್ಕೆ ಇರುವ ನಿಯಮಾವಳಿಗಳನ್ನು ಅನುಸರಿಸದ ಅಧಿಕಾರಿಗಳ ಮೇಲೆ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರಕಾರ ತತಕ್ಷಣ ರಸ್ತೆ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದರು. ಐದು ವರ್ಷದ ಹಿಂದೆ ನನ್ನ ಶಾಸಕತ್ವದ ಅವಧಿಯಲ್ಲಿ ಮಾಡಲಾದ ರಸ್ತೆಗಳು ಸುಸ್ಥಿತಿಯಲ್ಲಿರುವಾಗ ಇತ್ತೀಚೆಗೆ ಮಾಡಲಾದ ರಸ್ತೆಗಳು ಹೇಗೆ ಕೆಟ್ಟವು ಎಂದು ಪ್ರಶ್ನಿಸಿದರು.

ಅಧಿಕಾರಿಗಳ Transfer ಪ್ರಕ್ರಿಯೆಗೆ ನಾನು ಇಳಿಯುವುದಿಲ್ಲ, ನೇರವಾಗಿ ಸಸ್ಪೆಂಡ್ ಮಾಡಿಸುತ್ತೇನೆ ಎಂದು ಅಭಯ ಪಾಟೀಲ ಎಚ್ಚರಿಸಿದರು. ಎರಡು ವರ್ಷದಿಂದ ನಗರದಲ್ಲಿ ಮಾಡಲಾದ ರಸ್ತೆಗಳು, ಮಾಡಲಾದ ವೆಚ್ಚ, ಗುತ್ತಿಗೆದಾರನ್ಯಾರು, ರಸ್ತೆ ಗುಣಮಟ್ಟ ಪರಿಶೀಲಿಸಿದ ಅಧಿಕಾರಿ ಸಿಬ್ಬಂಧಿಯ ಸವಿವರ ಮಾಹಿತಿ ಪಾಲಿಕೆ ಕಮಿಷ್ನರ್ ಗೆ ಕೇಳಲಾಗಿದೆ ಎಂದರು. ಕಚಡಾ ಸಾಗಾಟ & ಬೀದಿದ್ವೀಪ ಹಾಕುವ ವಿಷಯದಲ್ಲಿ ಭಾರಿ ಗೋಲಮಾಲ್ ನಡೆದಿದೆ. ಕರೆಂಟ್ ಚೆಕಿಂಗ್ ವಾಹನಗಳು 8 ಇವೆ ಎನ್ನುವ ಗುತ್ತಿಗೆದಾರನ ಬಳಿ ಬರೀ ಮೂರೇ ವಾಹನಗಳು ಇದೆ. ಅದರಲ್ಲಿ ಎರಡು ಕೆಟ್ಟು ಒಂದೇ ಸುಸ್ಥಿತಿಯಲ್ಲಿದ್ದುದು ಕಂಡುಬಂತು ಎಂದು ಸುದ್ದಿಗೋಷ್ಠಿಯಲ್ಲಿ ಅಕ್ರಮ ತೆರೆದಿಟ್ಟರು.

ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಭೇಟಿ ಮಾಡಿ ನಗರದ ರಸ್ತೆಗಳ ದುಸ್ಥಿತಿ, ಭ್ರಷ್ಟಾಚಾರ ನಡೆದ ವಾಸನೆ ಬಗ್ಗೆ ಸುದೀರ್ಘ ಮಾಹಿತಿ ನೀಡಿ ಚರ್ಚೆ ಮಾಡಲಾಗಿದೆ. ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತದೆ ಕಾಯ್ದು ನೊಡೋಣ ಎಂದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.