ಉತ್ತಮ ಸಮಾಜಕ್ಕಾಗಿ

ಸಮಾಜಿಕ ಜಾಲತಾಣಗಳ ಬಳಕೆ ಸಮಾಜಕ್ಕೆ ಪೂರಕವಾಗಿರಲಿ

Use of social networks may complement society

0

ಬೆಳಗಾವಿ 24-(TarunKranti) ಯಾವುದೇ ವಿಚಾರ ಬಂದಾಗ ಪರ ವಿರೋಧ ಚರ್ಚೆ ಅವಶ್ಯ. ಇಂದು ಸಾಮಾಜಿಕ ಜಾಳತಾಣಗಳು ಅತ್ಯವಶ್ಯವಾಗಿವೆ. ಆದರೆ ಅವರು ತಮ್ಮ ಸ್ವಪ್ರಚಾರಕ್ಕೆ, ಅನಗತ್ಯ ವಿಷಯಗಳಿಗೆ ಹೆಚ್ಚಿಗೆ ಉಪಯೋಗಿಸಲಾಗುತ್ತಿದ್ದು.

ಸಮಾಜಿಕ ಅಂತರಾಜಾಲವು ಸಾಮಾಜಿಕ ಪೂರಕವಾದ ಕೆಲಸ ಕಾರ್ಯಗಳಿಗಾಗಿ ಉಪಯೋಗಿಸಬೇಕಾರಿವುದು ಅತ್ಯವಶ್ಯವಾಗುದೆ ಎಂದರು.
ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಾಮಾಜಿಕ ಜಾಲತಾಣಗಳು ಜಾಲಿತಾಣವಾವುತ್ತಿವೆಯೇ? ಎಂಬ ಹರಟೆ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ ಡುಂಡಿರಾಜ್ ಪ್ರತಿ ತಿಂಗಳೂ ತಪ್ಪದೆ ಸತತವಾಗಿ 46 ತಿಂಗಳಗಳ ಕಾಲ ಬೇರೆ ಬೇರೆ ವಿಷಯಗಳ ಕುರಿತಂತೆ ಹಾಸ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ನಾಡಿನ ತುಂಬೆಲ್ಲ ನಗೆಯನ್ನು ಪಸರಿಸುತ್ತಿರುವ ಹಾಸ್ಯಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದರು.
ಆದಿಕವಿ ಪಂಪ ಬನವಾಸಿ ದೇಶವನ್ನು ನನೆಯುವಂತೆ ಹನಿಗವಿತೆಯಲ್ಲಿ ಬೆಳಗಾವಿಯನ್ನು ನೆನೆಯುತ್ತ ಅವರು, ಖಡಕ ರೊಟ್ಟಿ ಮುರಿದೊಡಂ/ ಎಣ್ ಗಾಯ್ ಬಾಯಳಿಟ್ಟೊಡಂ/ ಕುಂದಾ ತಿಂದೊಡಂ/ ನೆನೆವುದೆನ್ನ ಮನಂ ಬೆಳಗಾವಿ ಜೀವನಂ ಹಾಗೂ ಹಾಸ್ಯಕೂಟ ಕುರಿತು, ಹಾಸ್ಯಕೂಟ ಸದಾ ಹೀಗೆ/ ಉಣಬಡಿಸಿದರೆ ನಗೆಹೋಳಿಗೆ/ ಬೆಳಗಾವಿಯ ನಗೆ/ ಕುಂದದ ಹಾಗೆ ಎಂದು ಹೇಳಿದರು.
ಸಮಾಜಿಕ ಜಾಲತಾಣಗಳು Jolly ತಾಣವಾಗುತ್ತಲಿವೆ ಎಂದು ಪ್ರೊ. ಜಿ. ಕೆ. ಕುಲಕರ್ಣಿ, ಎಂ. ಬಿ. ಹೊಸಳ್ಳಿ ಹಾಗೂ ಶ್ರೀಮತಿ ಸುನಿತಾ ದೇಸಾಯಿ ಮಾತನಾಡಿ ಜಾಲತಾಣಗಳ ಉಪಯೋಗಕ್ಕಿಂತ ದುರುಪಯೋಗಗಳೇ ಹೆಚ್ಚಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಲಿವೆ. ಕೋಮುಗಲಭೆಗಳನ್ನು ಹೆಚ್ಚಿಸುತ್ತಲಿವೆ. ಸಂಬಂಧಗಳನ್ನು ಬೆಸೆಯುವ ಬದಲು ಕಡಿತಗೊಳಿಸುತ್ತಲಿವೆ. ಜಾಲಿಗಾಗಿ ಉಪಯೋಗವಾಗುತ್ತಿರುವ ಈ ಸಾಮಾಜಿಕ ಜಾಲತಾಣಗಳನ್ನು ಸರ್ಕಾರವೇ ಮುಂದಾಗಿ ಬ್ಯಾನ್ ಮಾಡಬೇಕೆಂಬ ವಾದವನ್ನು ಮಂಡಿಸಿದರು. ವಾದಕ್ಕೆ ಪೂರಕವೆಂಬಂತೆ ನಗೆ ಪ್ರಸಂಗಗಳನ್ನು ಹಂಚಿಕೊಂಡ ಅವರು ಜನರನ್ನು ನಗಯಲೆಯೆಬ್ಬಿಸಿದವು.
ಸಮಾಜಿಕ ಜಾಲತಾಣಗಳು Jolly ತಾಣಗಳಲ್ಲ ಜನತೆಗೆ ಸಮಾಜಕ್ಕೆ ತುಂಬ ಉಪಯುಕ್ತವಾದವಗಳೆಂದು ಅಶೋಕ ಮಳಗಲಿ, ಜಿ. ಎಸ್. ಸೋನಾರ, ಸರ್ವಮಂಗಳಾ ಅರಳಿಮಟ್ಟಿ ಮಾತನಾಡಿ ಕಾಲ ಬದಲಾದಂತೆ ನಾವೂ ಬದಲಾಗಲೇ ಬೇಕು. ದೇಶದ ಅಭಿವೃದ್ಧಿಯಲ್ಲಿ ಜಾಲತಾಣಗಳು ಮಹತ್ತರಸ್ಥಾನವನ್ನು ವಹಿಸುತ್ತವೆ. ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿಕೊಳ್ಳಲು ಹೀಗೆ ಹತ್ತು ಹಲವಾರು ಉಪಯೋಗಗಳನ್ನು ಜಾಲತಾಣಗಳು ಹೊಂದಿವೆ. ದೀಪದಿಂದ ಮನೆಯನ್ನು ಬೆಳಗಬಹುದು, ಬೇರೆಯವರ ಮನೆಯನ್ನೂ ಸುಡಬಹುದು ಸದುಪಯೋಗದತ್ತ ಗಮನ ಹರಿಸೋಣವೆಂದು ಹಾಸ್ಯಹನಿಗಳ ಮಧ್ಯೆಯ ಮಂಡಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಕೆಳುಗರ ಪರವಾಗಿ ಶ್ರೀಮತಿ ಸುನಿತಾ ಪಾಟೀಲ, ಕೆ. ತಾನಾಜಿ, ರಾಜೇಂದ್ರ ಭಂಡಾರಿ ಮುಂತಾದವರ ಜಾಲತಾಣಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಾಮಾಜಿಕ ಜಾಲ ತಾಣಗಳು Jolly ತಾಣಗಳಾಗಿವೆಯಾ? ಈ ವಿಷಯಲ್ಲಿ ಜರುಗಿದ ಹರಟೆ ಮನಸ್ಸಿಗೆ ಮುದ ನೀಡುವದರ ಜೊತೆಗೆ ಒಂದಿಷ್ಟು ವಿಚಾರಗಳ ಕುರಿತು ಚಿಂತಿಸಲೂ ಪ್ರೆರೆಪಿಸಿತು. ಕಿಕ್ಕಿರದ ಜನಸ್ಥೋಮ, ಎರಡು ಗಂಟೆಗಳ ಕಾಲ ಜನರನ್ನು ರಂಜಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.
ಇದೇ ಸಂದರ್ಭದಲ್ಲಿ ಹನಿಗವಿ ಡುಂಡಿರಾಜ್ ಅವರನ್ನು ಶಾಲುಹೊದಿಸಿ , ಫಲಪುಷ್ಪ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಹಿರಿಯ ಕವಿ ಪ್ರೊ. ಎಂ. ಎಸ್. ಇಂಚಲ ವಹಿಸಿದ್ದರು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಎಲ್. ಎಸ್ ಶಾಸ್ತ್ರಿ ಆಗಮಿಸಿದ್ದರು. ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರವಿಂದ ಹುನಗುಂದ ನಿರೂಪಿಸಿದರು. ರಾಜು ಹಿರೇಮಠ ವಂದಿಸಿದರು.
ಡಾ. ಸಿದ್ದನಗೌಡ ಪಾಟೀಲ, ಡಾ. ಎ. ಎಲ್. ಕುಲಕರ್ಣಿ, , ಆರ್. ಬಿ. ಕಟ್ಟಿ, ಡಾ. ಬಸವರಾಜ ಜಗಜಂಪಿ, ಡಾ. ಡಿ. ಎಸ್. ಚೌಗಲೆ, ನಿರ್ಮಲಾ ಪ್ರಕಾಶ, ಬಸವರಾಜ ಸಸಾಲಟ್ಟಿ, ವ್ಯಾಸಾಚಾರ್ಯ ಅಂಬೇಕರ, ಮದನ ಕಣಬೂರ, ವಿಶ್ವನಾಥ ಕುಂಬಾರ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಬೆಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ನಮ್ಮ ಇನ್ನೊಂದು ಸುದ್ದಿತಾಣವು ಕರ್ನಾಟಕಾದ್ಯಂತ ಸುದ್ದಿಯನ್ನು ವಿಸ್ತರಿಸಿದೆ. ಅವುಗಳು ಇಂತಿವೆ.

Bagalkot NewsBellary NewsBengaluru Rural News Bengaluru Urban NewsBidar News- Chamarajanagar News Chikkaballapur News Chikkamagaluru News Chitradurga NewsDavanagere NewsDharwad News  Gadag News Hassan NewsHaveri NewsKalaburagi NewsKarwar NewsKodagu NewsKoppal NewsMandya News Mangalore NewsMysore NewsRaichur NewsRamanagara News  Shimoga News Tumkur NewsUdupi News Vijayapura NewsYadgir News 

Leave A Reply

 Click this button or press Ctrl+G to toggle between Kannada and English

Your email address will not be published.