ಉತ್ತಮ ಸಮಾಜಕ್ಕಾಗಿ

ವಿಡಿಯೋ ಸಂವಾದ ಕಾರ್ಯಕ್ರಮ: ಪ್ರಗತಿ ಪರಿಶೀಲನೆ

news belagavi

0

ಬೆಳಗಾವಿ: (news belgaum)ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ರಾಜ್ಯಮಟ್ಟದಿಂದ ಮಾನ್ಯ ಸಚಿವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ರವರ ಅಧ್ಯಕ್ಷತೆಯಲ್ಲಿ ಸಪ್ಟೆಂಬರ್ 3 ರಂದು ವಿಡಿಯೋ ಸಂವಾದ ಕಾರ್ಯಕ್ರಮ ಜರುಗಿತು.
ಸಚಿವರು ವಿಡಿಯೋ ಸಂವಾದದಲ್ಲಿ ಕಾಮಗಾರಿಗಳ ಆದ್ಯತೆ ಬಗ್ಗೆ ತಿಳಿಸಿದರು. ಜಿಲ್ಲಾ ಮಟ್ಟದಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ರವರು ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು. ಉದಾ: ಭೂ ಅಭಿವೃದ್ಧಿ, ತೋಟಗಾರಿಕೆ, ಬದು ನಿರ್ಮಾಣ, ಅರಣ್ಯ ಗಿಡ ನೆಡುವುದು, ರೇಷ್ಮೆ ನಾಟಿ, ಕೃಷಿ ಹೊಂಡ ಏರೆಹುಳು ಗೊಬ್ಬರ ತೊಟ್ಟಿ, ದನದ ದೊಡ್ಡಿ, ಕುರಿ/ಮೇಕೆ ದೊಡ್ಡಿ ಹಾಗೂ ವಸತಿ ಕಾರ್ಯಕ್ರಮಗಳನ್ನು ಪ್ರಥಮ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವುದು.
ಜಲ ಸಂರಕ್ಷಣೆ ಕಾಮಗಾರಿಗಳಾದ ಬಹು ಕಮಾನು ತಡೆ ಗೋಡೆ, ನಾಲಾ ಬದು, ಕಿಂಡಿ ಆಣೆಕಟ್ಟು , ಕೊಳವೆ ಬಾವಿ ಮರುಪೂರಣ ಘಟಕ, ಕರೆ ಹಾಗೂ ಕಾಲುವೆÉ/ನಾಲಾ ನದಿ ಪುನಶ್ಚೇತನ ಕಾರ್ಯಕ್ರಮಗಳನ್ನು ಹೆಚ್ಚಾಗಿ ಅನುಷ್ಠಾನಗೊಳಿಸುವುದು.
ಶಾಲಾ ಆಟದ ಮೈದಾನ, ಶಾಲಾ ಕಂಪೌಂಡ, ಅಂಗನವಾಡಿ, ಗ್ರಾಮೀಣ ಗೋದಾಮು, ಶಾಲಾ ಶೌಚಾಲಯ, ಕಾಮನ್ ವರ್ಕ ಶೆಡ್(ಎಸ್.ಎಚ್.ಜಿ), ಸಮುದಾಯ ದನದ ದೊಡ್ಡಿ ಹಾಗೂ ಹಳ್ಳಿ ಸಂತೆ ಇತ್ಯಾದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಂಡು ಗುಣ ಮಟ್ಟದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಬಹು ಕಾಲ ಬಾಳಿಕೆ ಬರುವಂತಹ ಆಸ್ತಿ ಸೃಜನೆ ಮಾಡಲು ಕ್ರಮ ವಹಿಸುವಬೇಕೆಂದು ಹಾಜರಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಈ ವಿಡಿಯೋ ಸಂವಾದದಲ್ಲಿ ಎಸ್.ಬಿ ಮುಳ್ಳಳ್ಳಿ, ಉಪ ಕಾರ್ಯದರ್ಶಿಗಳು ಅಭಿವೃದ್ದಿ ಜಿಲ್ಲಾ ಪಂಚಾಯತ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಂಚಾಯತ್ ರಾಜ್ ಇಂಜನೀಯರಿಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪಶು ಸಂಗೋಪನೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಐಇಸಿ ಸಂಯೋಜಕರು, ಸಹಾಯಕ ಐಇಸಿ ಜಿಲ್ಲಾ ಪಂಚಾಯತ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಎಮ್.ಐ.ಎಸ್. ಮತ್ತು ಐ.ಇ.ಸಿ ಸಂಯೋಜಕರು ಮತ್ತು ಮತ್ತು ಆಯ್ದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.