ಉತ್ತಮ ಸಮಾಜಕ್ಕಾಗಿ

ನೀತಿ ಸಂಹಿತೆ ಉಲ್ಲಂಘನೆ: ಅಕ್ರಮ ಮದ್ಯ ವಶ

Violation of Code of Conduct: Illegal liquor capture

0

ಬೆಳಗಾವಿ:(news belagavi) ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಬೈರಾಪೂರ ಚೆಕ್ಕ ಪೋಸ್ಟನಲ್ಲಿ ಎಸ್.ಎಸ್.ಟಿ ತಂಡದವರಿಂದ ಏಪ್ರಿಲ್ 12 ರಂದು ರೂ 4 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಸದರಿ ಹಣದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸಿ ಸದರಿ ಮೊತ್ತವು ಕೊಲ್ಹಾಪೂರ ಜಿಲ್ಲಾ ಸೆಂಟ್ರಲ್ ಕೋ-ಆಪರೇಟಿವ ಬ್ಯಾಂಕ ಲಿ, ಗೆ ಸಂಬಂಧಿಸಿದ್ದಾಗಿರುವುದರಿಂದ ಜಪ್ತು ಮಾಡಿದ ಹಣವನ್ನು ಏಪ್ರಿಲ್ 13 ರಂದು ಬಿಡುಗಡೆಗೊಳಿಸಲಾಗಿರುತ್ತದೆ ಚುನಾವಣಾ ಅಧಿಕಾರಿಗಳಾದ ಎಸ್.ಜಿಯಾವುಲ್ಲಾ ಅವರು ತಿಳಿಸಿದ್ದಾರೆ.

ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಬುಗುಟೆ ಆಲೂರ ಗ್ರಾಮದಲ್ಲಿ ಅಬಕಾರಿ ನಿರೀಕ್ಷಕರ ತಂಡದವರಿಂದ ಏಪ್ರಿಲ್ 13 ರಂದು ರೂ.20,000 ಮೌಲ್ಯದ 24.750 ಲೀ ಗೋವಾ ಮದ್ಯವನ್ನು ಹಾಗೂ ರೂ. 30,00,000ಮೌಲ್ಯದ ಟೋಯೋಟಾ ಪಾರ್ಚುನ ವಾಹನವನ್ನು ಅನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕೆ.ಕೆ.ಕೊಪ್ಪ ಗ್ರಾಮದಲ್ಲ್ಲಿ ಅಬಕಾರಿ ನಿರೀಕ್ಷಕರ ತಂಡದವರಿಂದ ಏಪ್ರಿಲ್ 13 ರಂದು ರೂ.9,534 ಮೌಲ್ಯದ 23.67 ಲೀ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅರಭಾವಿ ವಿಧಾನಸಭಾ ಕ್ಷೇತ್ರದ ತಿಗಡಿ ಗ್ರಾಮದಲ್ಲ್ಲಿ ಅಬಕಾರಿ ನಿರೀಕ್ಷಕರ ತಂಡದವರಿಂದ ಏಪ್ರಿಲ್ 13 ರಂದು ರೂ. 2,200 ಮೌಲ್ಯದ 6.480 ಲೀ ಮದ್ಯವನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ Violation of Code of Conduct: Illegal liquor capture

ಇಂದಿನವರೆಗಿನ ಒಟ್ಟು ಮಾಹಿತಿ:
ಒಟ್ಟು ಮದ್ಯ: 1296 ಲೀ ಹಾಗೂ ಮೌಲ್ಯ ರೂ, 2,90,757
ಒಟ್ಟು ಹಣ: ರೂ, 43,68,570
ಸಲಕರಣೆಗಳ + ವಾಹನಗಳ ಒಟ್ಟು ಮೌಲ್ಯ: ರೂ, 3,31,62,160
ಒಟ್ಟು ವಾಹನಗಳು: 48 + 2 ಸೈಕಲ್
ಬಂಧನಕ್ಕೊಳಪಡಿಸಿದ ಆರೋಪಿಗಳ ಸಂಖ್ಯೆ: ಬೆಳಗಾವಿ ನಗರ-16 ಬೆಳಗಾವಿ ಗ್ರಾಮೀಣ-41
ಇಂದಿನವರಗೆ ದಾಖಲಿಸಿದ ಒಟ್ಟು ಎಫ್.ಐ.ಆರ್ ಸಂಖ್ಯೆ: 148

ಈ ದಿವಸ ದಿನಾಂಕ:14-04-2018 ರಂದು ಚುನಾವಣಾ ನಿಮಿತ್ಯ ಅಬಕಾರಿ ಗಸ್ತು ನಡೆಸುತ್ತಿರುವಾಗ ಬೆಳಿಗ್ಗೆ 1-30 ಗಂಟೆಯ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ ತಪಾಸಣಾ ಬಂಗಲೆ ಮುಂಬಾಗದ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿದ ಕಾಲಕ್ಕೆ ಆರೋಪಿತನಾದ ಬಾಬಾಸಾಹೇಬ ಭಿಕಾಜಿ ವಾಹೂಳೆ ವಯಸ್ಸು:33 ವರ್ಷ ಜಾತಿ:ಎಸ್.ಸಿ ಸಾ:ಹರ್ಸಿ(ಬಿ.ಕೆ), ತಾಲೂಕಾ ಪೈಠಾಣ ಜಿಲ್ಲೆ ಔರಂಗಾಬಾದ ಮಹಾರಾಷ್ಟ್ರ ರಾಜ್ಯ ಇತನು ಅಕ್ರಮವಾಗಿ ಟಾಟಾ ಕಂಪನಿಯ 407 ಟಿಂಪೋ ವಾಹನ ನೊಂದಣಿ ಸಂ:ಎಂಎಚ್-12 ಎಂ.ವಿ-7059 ನೇದ್ದರಲ್ಲಿ 270.210 ಲೀ ಗೋವಾ ಮದ್ಯ, 24 ಲೀ ಗೋವಾ ಬೀಯರ್, ಬಾಟಲಿಗಳು ಪತ್ತೆಯಾದದ್ದು ಕಂಡು ಬಂದವು. ಸದರಿ ಅವುಗಳನ್ನು ತಪಾಸಿಸಲಾಗಿ 1) 750 ಎಂಎಲ್ ಅಳತೆಯ ಇಂಪೀರಿಯಲ್ ವ್ಯಾಟ ನಂ:1 ವಿಸ್ಕಿ 12 ಬಾಟಲಿಗಳು 2) 750 ಎಂಎಲ್ ಅಳತೆಯ ರಾಯಲ್ ಸ್ಟ್ಯಾಗ್ ವಿಸ್ಕಿ 16 ಬಾಟಲಿಗಳು 3) 750 ಎಂಎಲ್ ಅಳತೆಯ ಮ್ಯಾಗಡಾಲ್ ನಂ:1xxx ರಮ್ 27 ಬಾಟಲಿಗಳು 4) 750 ಎಂಎಲ್ ಅಳತೆಯ ಡಿಎಸ್‍ಪಿ ಬ್ಲ್ಯಾಕ್ ವಿಸ್ಕಿ 12 ಬಾಟಲಿಗಳು 5) 750 ಎಂಎಲ್ ಅಳತೆಯ ರಿಯಲ್ಸ್ ವಿಸ್ಕಿ 132 ಬಾಟಲಿಗಳು 6) 180 ಎಂಎಲ್ ಅಳತೆಯ ಮ್ಯಾಕ್‍ಡಾವೆಲ್ ನಂ:1xxx ರಮ್ 144 ಬಾಟಲಿಗಳು 7) 180 ಎಂಎಲ್ ಅಳತೆಯ ಮ್ಯಾಕ್‍ಡಾವೆಲ್ ನಂ:1 ವಿಸ್ಕಿ 96 ಬಾಟಲಿಗಳು 8) 180 ಎಂಎಲ್ ಅಳತೆಯ ನ್ಯಾಷನಲ್ ಡಾಕ್ಟರ್ ಬ್ರ್ಯಾಂಡ ವಿಸ್ಕಿ 432 ಬಾಟಲಿಗಳು 9) 500 ಎಂಎಲ್ ಅಳತೆಯ ಕಿಂಗಪಿಷರ್ ಪ್ರೀಮಿಯಂ ಬೀಯರ್ 48 ಟಿನ್‍ಗಳು 10) ಒಂದು ಟಾಟಾ ಕಂಪನಿಯ 407 ಟಿಂಪೋ ವಾಹನ ನೊಂದಣಿ ಸಂ:ಎಂಎಚ್-12 ಎಂ.ವಿ-7059 ಆರು ಚಕ್ರದ ವಾಹನ ಜಪ್ತುಪಡಿಸಿಕೊಳ್ಳಲಾಗಿದೆ. ಇದರ ಜೊತೆ ಸಾಗಾಣಿಕೆಯಾಗುತ್ತಿದ್ದ ಬಜಾಜ ಮಿಡಿಯಾ ಬಿ.ಪಿ 2200 400 ಎಂ.ಎಂ ಪೆಡೆಸ್ಟಾಲ್ ಪ್ಯಾನ್ ಎಲೆಕ್ಟ್ರಾನಿಕ್ ವಸ್ತುಗಳು 9 ಬಾಕ್ಸಗಳು, ಬಜಾಜ ತೇಜ್ ಫರಾಟಾ ಪ್ಯಾನ್ ಸ್ವೀಫ್ 500 ಎಂ.ಎಂ ಎಕ್ಷಸರೀಜ್ ಎಲೆಕ್ಟ್ರಾನಿಕ್ ವಸ್ತುಗಳು 2 ಬಾಕ್ಸ್, ಬಜಾಜ ಮೆಜಸ್ಟೀ ನಿವ್ ಆರ್.ಸಿ. ಎಕ್ಸ್ 21 ಡಿಲಕ್ಸ್ ಮಲ್ಟಿ ಪಕ್ಷನ್ ಕೂಕ್ಕರ 1ಬಾಕ್ಸ್, ಬಜಾಜ ಮೆಜಸ್ಟೀ ಸಿಎಕ್ಸ್ 10ಡಿ 4 ಬರ್ನರ್ ಕುಕ್ ಟಾಪ್ 1 ಬಾಕ್ಸ್‍ಗಳನ್ನು ಕೂಡಾ ಮೊಕದ್ದಮೆಯಲ್ಲಿ ಜಪ್ತುಪಡಿಸಿಕೊಳ್ಳಲಾಗಿದೆ.

ಸದರಿ ದಾಳಿಯನ್ನು ಡಾ:ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರಾದ ಶ್ರೀ: ಅರುಣಕುಮಾರ. ಕೆ ಇವರ ನಿರ್ದೇಶನದಂತೆ ವಿಜಯಕುಮಾರ ಜೆ ಹಿರೇಮಠ ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾರವರ ಇವರ ನೇತೃತ್ವದಲ್ಲಿ ಲಿಂಗರಾಜ.ಕೆ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ ಹಾಗೂ ಸಿಬ್ಬಂದಿಗಳಾದ ಪ್ರವೀಣ ಹೂಲಿ, ಸುರೇಶ ಹಳಬನವರ, ದಪೇದಾರ ಹಾಗೂ ಬಿ.ಎಸ್.ಅಟಿಗಲ್ ಇವರು ದಾಳಿಯಲ್ಲಿ ಪಾಲ್ಗೊಂಡಿರುತ್ತಾರೆ. ಸದರಿ ಮೊಕ್ಕದ್ದಮೆಯಲ್ಲಿ ಜಪ್ತಾದ ಮದ್ಯದ ಬೆಲೆ ರೂ:1,16,800/-ಗಳು, ವಾಹನದ ಮೌಲ್ಯ ರೂ:6,00,000/-ಗಳು ಒಟ್ಟು ರೂ:7,16,800/-ಗಳು ಆಗಿರುತ್ತದೆ. ಸದರ ಗುನ್ನೆಯಲ್ಲಿ ಜಪ್ತುಪಡಿಸಿದ ಸದರ ಮಾಹಿತಿಯನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿಸಿದೆ.Violation of Code of Conduct: Illegal liquor capture

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.