ಉತ್ತಮ ಸಮಾಜಕ್ಕಾಗಿ

ಮತದಾರರ ಸಾಕ್ಷರತೆ ಕ್ಲಬ್ ರಚನೆ

Voter Literacy Club Creation

0

ಬೆಳಗಾವಿ: (tarunkranti)ನಗರದ ಸರ್ದಾರ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಮತದಾರರ ಸಾಕ್ಷರತೆ ಕ್ಲಬ್‍ನ್ನು ರಚಿಸಲಾಯಿತು.
ಮತದಾರರ ಸಾಕ್ಷರತೆ ಕ್ಲಬ್ ರಚನೆ- Tarun kranti 1ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಅರಿವು, ಮಾರ್ಗದರ್ಶನ ನೀಡಲಾಯಿತು. ಗ್ರಾಮೀಣ ಪ್ರದೇಶದಲ್ಲಿ, ಹೋಬಳಿಗಳಲ್ಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮತದಾನದ ಅರಿವು ಮೂಡಿಸಲು ತಿಳಿಸಲಾಯಿತು.
ಕಾಲೇಜಿನ ಉಪನ್ಯಾಸಕರು ಮತದಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, 18 ವರ್ಷ ತುಂಬಿರುವ ಪ್ರತಿಯೊಬ್ಬ ನಾಗರಿಕನು ಮತ ಚಲಾಯಿಸಬೇಕು. 18 ವರ್ಷ ತುಂಬಿರುವ ಎಲ್ಲ ನಾಗರಿಕರು ಸಂಬಂಧಪಟ್ಟ ಮತದಾರರ ಕೇಂದ್ರದಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ತಮ್ಮ ಹೆಸರು ಇರುವುದರ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಯಸ್ಸು ಮತ್ತು ವಿಳಾಸದ ಬಗ್ಗೆ ದೋಷಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಎರಡು ಕೇಂದ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಾಗಿದ್ದರೆ , ಒಂದೇ ಕೇಂದ್ರದಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಬೇಕು. ಹೊಸ ತಂತ್ರಜ್ಞಾನದ ಮೂಲಕ ಈಗ ಎಲೆಕ್ಟ್ರಾನಿಕ ವೋಟಿಂಗ್ ಮೆಷಿನ್ ಅಳವಡಿಸಿರುವ ಬಗ್ಗೆ ಮತ್ತು ಅದು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಉಪನ್ಯಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

belgaum Voter Literacy Club Creation

Leave A Reply

 Click this button or press Ctrl+G to toggle between Kannada and English

Your email address will not be published.