ಉತ್ತಮ ಸಮಾಜಕ್ಕಾಗಿ

ಮತದಾನ ಹಂತ

Voting phase

0

news belagavi

ಮತದಾನ ಕೊನೆಯ ಹಂತ 5ನೇ ರೌಂಡ್ ಮತದಾನ: 69.23%

ಬೆಳಗಾವಿ: ಬೆಳಗಾವಿ ಜಿಲ್ಲೆಯ 5ನೇ ರೌಂಡ್ ಮತದಾನದ ಸರಾಸರಿ ಫಲಿತಾಂಶ 69.23% ರಷ್ಟು ದಾಖಲಾಗಿದೆ.
ಇನ್ನೇನು ಮತದಾನ ಮುಕ್ತಾಯಕ್ಕೆ ಕೆಲವೇ ಕೆಲವು ನಿಮಿಷಗಳು ಬಾಕಿ ಇದ್ದಾಗಲೇ ಶನಿವಾರ ಸಂಜೆ ಮತದಾನ ಮುಕ್ತಾಯದ ವೇಳೆಗೆ 69.23% ರಷ್ಟು ಸರಾಸರಿ ಮತದಾನ ದಾಖಲಾಯಿತು.
18 ಕ್ಷೇತ್ರಗಳು:
ನಿಪ್ಪಾಣಿ:77.59%
ಚಿಕ್ಕೋಡಿ ಸದಲಗಾ:80.07%
ಅಥಣಿ: 71.71%
ಕಾಗವಾಡ:76.04%
ಕುಡಚಿ: 70.71%
ರಾಯಭಾಗ: 66.00%
ಹುಕ್ಕೇರಿ: 70.29%
ಅರಭಾವಿ: 65.60%
ಗೋಕಾಕ: 66.51%
ಯಮಕನಮರಡಿ: 73.62%
ಬೆಳಗಾವಿ ಉತ್ತರ:61.65%
ಬೆಳಗಾವಿ ದಕ್ಷಿಣ: 58.20%
ಬೆಳಗಾವಿ ಗ್ರಾಮೀಣ:66.88%
ಖಾನಾಪುರ:65.45%
ಕಿತ್ತೂರ: 65.28%
ಬೈಲಹೊಂಗಲ: 71.62%
ಸವದತ್ತಿ: 72.84%
ರಾಮದುರ್ಗ: 66.80%

ಗೋಕಾಕನಲ್ಲಿ ಚುನಾವಣಾ ಅಕ್ರಮ ಆರೋಪ: CECಗೆ ಅಶೋಕ ಪೂಜಾರಿ ಇ-ಮೇಲ್

ಬೆಳಗಾವಿ: ಗೋಕಾಕ ಮತ ಕ್ಷೇತ್ರದಲ್ಲಿ ಮತದಾನದ ದಿನವಾದ ಇಂದು ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಅವರ ಪರ ಚುನಾವಣೆ ಎಜೆಂಟರಿಗೆ ಬೂತನಲ್ಲಿ ಪ್ರವೇಶಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿ CEC ದೆಹಲಿ & CEO ಬೆಂಗಳೂರು ಅವರಿಗೆ ತುರ್ತು ಇಮೇಲ್ ರವಾಣಿಸಿದ್ದಾರೆ. ಗೋಕಾಕ ಮತಕ್ಷೇತ್ರದಲ್ಲಿ ಬಹುಪಾಲು ಹೋಂ ಗಾರ್ಡ ಸಿಂಬಂಧಿ ಮಾತ್ರ ಇದ್ದು, ಕೇಂದ್ರಿಯ ಭದ್ರತಾ ಪಡೆಗಳ ನಿಯೋಜನೆ ಬಹಳವೇ ಕಡಿಮೆ ಈ ಕ್ಷೇತ್ರದಲ್ಲಿ ಹಾಕಲಾಗಿದೆ ಎಂದು ಭಾರತ ಚುನಾವಣಾ ಆಯುಕ್ತರ ಗಮನ ಅಶೋಕ ಪೂಜಾರಿ ಸೆಳೆದಿದ್ದಾರೆ.
ಗೋಕಾಕ ನಗರದಲ್ಲಿ ಚುನಾವಣಾ ಅಧಿಕಾರಿಗಳೆ ಅಕ್ರಮ ಮತದಾನ ಮಾಡಿಸಲು ಸಹಕರಿಸುತ್ತಿದ್ದಾರೆ ಎಂಬ ನೇರ ಗಂಭೀರ ಆರೋಪ ಸಹ ಅಶೋಕ ಪೂಜಾರಿ ಮಾಡಿದ್ದು ಜಿಲ್ಲಾಧಿಕಾರಿ ಬೆಳಗಾವಿ, ಗೋಕಾಕ ಜನರಲ್ ಅಬ್ಸರ್ವರ್ ಹಾಗೂ ಗೋಕಾಕ ರಿಟರ್ನಿಂಗ್ ಆಫಿಸರ್ ಅವರ ಗಮನಕ್ಕೂ ಅವರು ತಂದಿದ್ದಾರೆ.

ಡಿಸಿ ಎಸ್. ಜಿಯಾವುಲ್ಲಾ, ಸಿಇಓ ಆರ್. ರಾಮಚಂದ್ರನ್ ಮತದಾನ

ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಇಂದು ನಗರದ ವಿಶ್ವೇಶ್ವರಯ್ಯ ನಗರ ಕನ್ನಡ ಶಾಲೆ ನಂ. 26 ರಲ್ಲಿ ಸಂಜೆ 4ಕ್ಕೆ ಮತದಾನ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಆರ್. ರಾಮಚಂದ್ರನ್ ಸಹ ಇದೇ ಶಾಲೆಯಲ್ಲಿ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಜನತೆ ಕಡ್ಡಾಯವಾಗಿ ಮತದಾನ ಮಾಡಿ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಹಾಗೂ ಸಿಇಓ ಆರ್. ರಾಮಚಂದ್ರನ್ ಜನತೆಗೆ ಮನವಿ ಮಾಡಿದರು.

ಬೆಳಗಾವಿ: ಸಂಜೆ ನಾಲ್ಕನೇ ರೌಂಡ್ ಶೇ.54.41 ಮತದಾನ

ಬೆಳಗಾವಿ: ಸಂಜೆ ಜಿಲ್ಲೆಯಲ್ಲಿ ನಾಲ್ಕನೇ ರೌಂಡ ಮತದಾನ ಫಲಿತಾಂಶ ಹೊರಬಿದ್ದಾಗ ಸರಾಸರಿ ಜಿಲ್ಲೆಯ ಒಟ್ಟು ಶೇ 54.41 ರಷ್ಟು ಮತದಾನವಾಗಿದೆ. ಎಲ್ಲ 18 ಕ್ಷೇತ್ರಗಳ ಸರಾಸರಿ ಫಲಿತಾಂಶ ನೋಡಿದಾಗ ಸಂಜೆ ಹೊತ್ತಿಗೆ (ಶೇ. 54.41) ತಲುಪಿತು. ಇಂದು ಮಧ್ಯಾಹ್ನ ಮೂರನೇ ರೌಂಡನಲ್ಲಿ 40.05 ಹಾಗೂ ಬೆಳಿಗ್ಗೆ ಎರಡನೇ ರೌಂಡನಲ್ಲಿ 21.05 ಶೇ. ಮತದಾನ ದಾಖಲಾಗಿತ್ತು.
18 ಕ್ಷೇತ್ರಗಳು:
ನಿಪ್ಪಾಣಿ: 64.42%
ಚಿಕ್ಕೋಡಿ ಸದಲಗಾ:64.02%
ಅಥಣಿ: 58.33%
ಕಾಗವಾಡ: 57.05%
ಕುಡಚಿ: 51%
ರಾಯಭಾಗ: 53%
ಹುಕ್ಕೇರಿ: 56.69%
ಅರಭಾವಿ: 51.09%
ಗೋಕಾಕ: 55.10%
ಯಮಕನಮರಡಿ: 59.13%
ಬೆಳಗಾವಿ ಉತ್ತರ:44.74%
ಬೆಳಗಾವಿ ದಕ್ಷಿಣ: 44.74%
ಬೆಳಗಾವಿ ಗ್ರಾಮೀಣ: 51.07%
ಖಾನಾಪುರ: 52.80%
ಕಿತ್ತೂರ: 46.75%
ಬೈಲಹೊಂಗಲ: 49.51%
ಸವದತ್ತಿ: 58.25%
ರಾಮದುರ್ಗ: 53.06%

ಜಿಲ್ಲೆಯ ಮೂರನೇ ರೌಂಡ್ ಶೇ. ‘40.05’ ಮತದಾನ

Auto Draft- Tarun kranti 30ಬೆಳಗಾವಿ: ಮಧ್ಯಾಹ್ನ ಜಿಲ್ಲೆಯಲ್ಲಿ ಮೂರನೇ ರೌಂಡ ಮತದಾನ ಫಲಿತಾಂಶ ಹೊರಬಿದ್ದಾಗ ಸರಾಸರಿ ಜಿಲ್ಲೆಯ ಒಟ್ಟು ಶೇ 40.05 ರಷ್ಟು ದಾಖಲಾಗಿದೆ.
ಎಲ್ಲ 18 ಕ್ಷೇತ್ರಗಳ ಸರಾಸರಿ ಫಲಿತಾಂಶ
ನಿಪ್ಪಾಣಿ: %48.27
ಚಿಕ್ಕೋಡಿ ಸದಲಗಾ: %46.27
ಅಥಣಿ: %42
ಕಾಗವಾಡ: %48.02
ಕುಡಚಿ: %27
ರಾಯಭಾಗ: %41
ಹುಕ್ಕೇರಿ: %39.11
ಅರಭಾವಿ: %39
ಗೋಕಾಕ: %40.77
ಯಮಕನಮರಡಿ: %44.58
ಬೆಳಗಾವಿ ಉತ್ತರ: %44
ಬೆಳಗಾವಿ ದಕ್ಷಿಣ: %35.98
ಬೆಳಗಾವಿ ಗ್ರಾಮೀಣ: %36.03
ಖಾನಾಪುರ: %40.16
ಕಿತ್ತೂರ: %26.33
ಬೈಲಹೊಂಗಲ: %38
ಸವದತ್ತಿ: %41.63
ರಾಮದುರ್ಗ: %32.14
ಸಂಜೆ 6pm ವರೆಗೆ ಮಳೆ ಬಾರದಿದ್ದರೆ ಮುಂದಿನ ಮೂರು ರೌಂಡಗಳಲ್ಲಿ ( 3, 5 & 6pm) ಜಿಲ್ಲೆಯ ಒಟ್ಟು ಮತದಾನ ಕನಿಷ್ಠ %80 ರ ಮೇಲ್ಪಟ್ಟು ಜಿಲ್ಲೆಯಾದ್ಯಂತ ಮತದಾನ ನಡೆಯುವ ನಿರೀಕ್ಷೆ ಇದೆ. ಕಳೆದ ಬಾರಿಗೆ ಹೋಲಿಸಿದರೆ ಜಿಲ್ಲೆಯ ಮತದಾನ ಹೆಚ್ಚಲಿರುವುದು ಸಂತಸದ ವಿಷಯ. Voting phase

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.