ಉತ್ತಮ ಸಮಾಜಕ್ಕಾಗಿ

ವಿಕಲ ಚೇತನರು ಕಡ್ಡಾಯವಾಗಿ ಮತದಾನ ಮಾಡಲಿ : ಸಿಇಒ ರಾಮಚಂದ್ರನ್ ಆರ್

Voting should be mandatory: CEO Ramachandran R.

0

ಬೆಳಗಾವಿ: (news belgaum)ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಕಲಚೇತನರು ಕಡ್ಡಾಯವಾಗಿ ಮತದಾನ ಮಾಡಬೇಕು. ಜೊತೆಗೆ ನಿಮ್ಮ ಸಹಪಾಠಿಗಳಿಗೂ ಮತದಾನದಲ್ಲಿ ಭಾಗವಹಿಸುವಂತೆ ತಿಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಹೇಳಿದರು.
ನಗರದ ಬಾಲಭವನದಲ್ಲಿ ಶುಕ್ರವಾರ (ಫ23) ಆಯೋಜಿಸಿದ್ದ ವಿಕಲಚೇತನರು 2018ರ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳಲ್ಲಿ ವಿಕಲ ಚೇತನರು ಕಡ್ಡಾಯವಾಗಿ ಮತದಾನ ಮಾಡಲಿ : ಸಿಇಒ ರಾಮಚಂದ್ರನ್ ಆರ್- Tarun krantiಪಾಲ್ಗೊಳಲು ಅಗತ್ಯ ವಾತಾವರಣ ಹಾಗೂ ಸೌಲಭ್ಯ ಕಲ್ಪಿಸುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಕಲತೆಯು ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ. ಆದ್ದರಿಂದ ನಿಮ್ಮಲ್ಲಿ ಅಡಗಿರುವ ಕೌಶ್ಯಲಗಳನ್ನು ಹೊರತರುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ವಿಶೇಷ ಚೇತನರು ಕಡ್ಡಾಯವಾಗಿ ಮತದಾನ ಮಾಡಿದರೇ ಕಿರು ಕಾಣಿಕೆ ನೀಡುವುದಾಗಿ ತಿಳಿಸಿದರು.
ಜಿಲ್ಲೆಯ ಎಲ್ಲ ಮತಗಟ್ಟೆಗಳ ಮತದಾರರ ಪಟ್ಟಿಯನ್ನು ಪಡೆದುಕೊಂಡು ಅದರಲ್ಲಿ ವಿಕಲಚೇತನರ ಕ್ರಮ ಸಂಖ್ಯೆ, ಚುನಾವಣಾ ಗುರುತಿನ ಪತ್ರದ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಕಲತೆ ಸ್ವರೂಪ ಮತಗಟ್ಟೆಗೆ ಮತದಾನ ಮಾಡಲು ಅವಶ್ಯಕವಿರುವ ಸೌಲಭ್ಯ (ಗಾಲಿ ಕುರ್ಚಿ, ಭೂತ ಕನ್ನಡಿ, ವಾಕರ ಇತ್ಯಾದಿ) ಗಳ ಬಗ್ಗೆ ವಿವರಗಳ ಪಟ್ಟಿಯನ್ನು ತಯಾರಿಸಿ, ಸೌಲಭ್ಯಗಳನ್ನು ಕಲ್ಪಿಸಲು ಅದನ್ನು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸುವುಂತೆ ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವ ವಿಶೇಷ ಚೇತನರ ವಿವರಗಳನ್ನು ನಮೂನೆ-6ರಲ್ಲಿ ತುಂಬಿ ವಿಳಾಸ ಖಾತರಿಗೆ ಗುರುತಿನ ಪತ್ರ (ಪಡಿತರ ಚೀಟಿ ಇತ್ಯಾದಿ) ಮತ್ತು ಅಗತ್ಯ ದಾಖಲೆ ಒದಗಿಸಿ ಪಟ್ಟಿಯಲ್ಲಿ ನೋಂದಣಿಗೆ ಕ್ರಮವಹಿಸುವುಂತೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಂ ಮುನಿರಾಜು ಅವರು ಸ್ವಾಗತಿಸಿ ಮಾತನಾಡಿ, ಜಿಲ್ಲೆಯ ಎಲ್ಲ ವಿಕಲಚೇತನರಿಗೂ 2018ರ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೋಳುವಂತೆ ತಿಳಿಸಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ವಂದಿಸಿದರು. ಜಿಲ್ಲೆಯ ಎಮ್.ಆರ್.ಡಬ್ಲ್ಯೂ,.ವಿ.ಆರ್.ಡಬ್ಲ್ಯೂಗಳು ಸೇರಿದಂತೆ ಇನ್ನಿತರರು ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.Voting should be mandatory: CEO Ramachandran R.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.