ಉತ್ತಮ ಸಮಾಜಕ್ಕಾಗಿ

“ಜಲಾಮೃತ” ಹೊಸ ಪರಿಕಲ್ಪನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

Water conservation work is undertaken at the launch of a "waterproof" new concept.

0

                                                   “ಜಲಾಮೃತ”

ಬೆಳಗಾವಿ: (news belgaum) “ಜಲವೇ ಜೀವನ” ಎಂಬ ಮಾತಿನಂತೆ ಪ್ರಾಣಿ ಸಂಕುಲಕ್ಕೆ ಅವಶ್ಯಕವಾದದ್ದು ಜಲ (ನೀರು) ಇಂದಿನ ದಿನಮಾನದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ನದಿ, ಕೆರೆ, ಬಾವಿ, ಹಳ್ಳ, ಕೊಳ್ಳ, ಕೊಳವೆಬಾವಿಗಳು, ಬತ್ತಿ ಹೋಗುತ್ತಿರುವುದರಿಂದ ನೀರಿನ ಸಮಸ್ಯೆ ಹೆಚ್ಚುತ್ತಿದೆ. ನೀರು ಅತ್ಯಮೂಲ್ಯವಾಗಿರುವುದರಿಂದ ನೀರಿನ ಸಂಗ್ರಹಣೆ ಅತೀ ಅವಶ್ಯಕವಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2015-16ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿಯಿಂದ “ಜಲಾಮೃತ” ಹೊಸ ಪರಿಕಲ್ಪನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದರಿಂದ ನಮ್ಮ ಬೆಳಗಾವಿ ಜಿಲ್ಲೆಗೆ 2017-18ರಲ್ಲಿ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ.
ನಮ್ಮ ಜಿಲ್ಲೆಯಲ್ಲಿ ಬಹುತೇಕ ಜನರು ಕೃಷಿಯನ್ನೆ ಅವಲಂಬಿತರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ, ರೈತರು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಇವರ ಕ್ಷೇತ್ರದ ಅಭಿವೃದ್ದಿಯೆ ಇಂದಿನ ಪ್ರಮುಖ ಉದ್ದೇಶವಾಗಿದೆ ಬರುವಂತಹ ಮಳೆ ಏರುಪೇರಿನಿಂದ ಭೂ ಸವಕಳಿ ಉಂಟಾಗಿ, ಜನಸಂಖ್ಯೆಯ ಒತ್ತಡದಿಂದ ಕಾಡು ಕಡಿಮೆಯಾಗಿ ಮಳೆ ಅನಿಶ್ಚಿತತೆ ಉಂಟಾಗಿ ಕೃಷಿ ಅಭಿವೃದ್ದಿಯು ಕುಂಟಿತವಾಗುವ ಸಂಭವವನ್ನು ತಪ್ಪಿಸಲು ಜಲಾನಯನ ಅಭಿವೃದ್ದಿ ಬಹಳ ಪ್ರಾಮುಖ್ಯತತೆ ಪಡೆದಿದೆ.
News Belgaum-"ಜಲಾಮೃತ" ಹೊಸ ಪರಿಕಲ್ಪನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.ಮಳೆಯಾದಾಗ ದಿಬ್ಬದಿಂದ ಕಣಿವೆಯತ್ತ ಒಂದು ನಿರ್ದಿಷ್ಟ ಬಿಂದುವಿನಿಂದ ಬರುವಂತ ನೀರಿನ ಪ್ರದೇಶವನ್ನು ಜಲಾನಯನ ಎಂದು ಕರೆಯಲಾಗುತ್ತದೆ. ಒಟ್ಟಾರೆ ನಾಲಾ ಅಥವಾ ಹಳ್ಳದಿಂದ ಆಯ್ಕೆ ಮಾಡಿದ ಬಿಂದುವಿನಿಂದ ಮಳೆ ನೀರು ಒದಗಿಸುವ ಭೂ ಪ್ರದೇಶಕ್ಕೆ ಜಲಾನಯನ ಎಂದು ಕರೆಯಬಹುದಾಗಿದೆ. ದಿಬ್ಬದಿಂದ ಕಣಿವೆಯತ್ತ ನೀರು ಚಲಿಸುವಾಗ ಮಣ್ಣು ಮತ್ತು ಮಣ್ಣಿನ ತೇವಾಂಶ, ಜೀವರಾಶಿ ಮತ್ತು ಅರಣ್ಯಗಳನ್ನು ಸಂರಕ್ಷಿಸಿ ಮಾನವನಿಗೆ ದೈನಂದಿನ ಬೇಡಿಕೆಗಳನ್ನು ಈಡೇರಿಸಲು ಸಲುವಾಗಿ ಸಮಗ್ರ ರೀತಿಯ ಅಭಿವೃದ್ದಿಯನ್ನು ಜಲಾನಯನ ಯೋಜನೆಗಳ ಮುಖಾಂತರ ಕೈಗೊಳ್ಳುವುದು ಈ ದಿನದ ಮಹತ್ವದ ಕೆಲಸವಾಗಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಣಾಮ ನೈಸರ್ಗಿಕ ಸಂಪತ್ತಿನ ನಾಶದಿಂದ ಮಣ್ಣಿನ ಸವಕಳಿ ಹೆಚ್ಚಾಗಿ ಭೂ ಫಲವತ್ತತೆ ಕಡಿಮೆಯಾಗುತ್ತದೆ. ಇದರೊಂದಿಗೆ ಕೃಷಿ ಉತ್ಪನ್ನದ ಮೇಲೆ ದುಪ್ಟರಿಣಾಮ ಆಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ದಿನ ನಿತ್ಯದ ಆಹಾರ ಬೇಡಿಕೆ, ಜಾನುವಾರುಗಳ ಮೇವು ಮತ್ತು ಕೃಷಿ ಆಧಾರಿತ ಗುಡಿ ಕೈಗಾರಿಕೆಗಳನ್ನು ಸುಸ್ಥಿತಿಯಲ್ಲಿಡಲು ಸರ್ವತೋಮುಖವಾದ ಸಮಗ್ರ ಜಲಾನಯನ ಅಭಿವೃದ್ದಿಯ ಅವಶ್ಯಕತೆ ಬಹಳಷ್ಟದೆ.
ಅಲ್ಪ ಆಳದ ಭಾವಿ, ಕಿಂಡಿ ಆಣೆಕಟ್ಟು, ನಾಲಾ ಬದು, ಭೂ ಅಭಿವೃದ್ಧಿ, ಕೃಷಿ ಹೊಂಡ, ಬೋರವೆಲ್ ರಿಚಾರ್ಜ ಪಿಟ್, ಕೃಷಿ ಅರಣ್ಯೀಕರಣ ಮತ್ತು ಕೃಷಿ ತೋಟಗಾರಿಕೆ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಯೋಜನೆಯಡಿ ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗಾವಕಾಶ ನೀಡಲಾಗಿದ್ದು, 2018-19ನೇ ಸಾಲಿಗೆ ಒಂದು ಮಾನವದಿನಕ್ಕೆ 249 ರೂಪಾಯಿಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಸಾಲಿನ ಮೇ-2018 ತಿಂಗಳ ಅಂತ್ಯದಲ್ಲಿ 13,38,670 ಮಾನವದಿನಗಳು ಸೃಜನೆಯಾಗಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆಯಲಾಗಿದೆ. ಪ್ರಸ್ತುತ ಮಳೆಯಾಗಿರುವುದರಿಂದ ನೀರಿನ ಸಂಗ್ರಹಣೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಸಂಗ್ರಹವಾದ ನೀರನ್ನು ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದಿನ ಹಾಗೂ ಪ್ರಸ್ತುತ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರಿಕಲ್ಪನೆಯಿಂದ ಹಾಗೂ ಪರಿಶ್ರಮದಿಂದ ಅನುಷ್ಠಾನಗೊಂಡ ಈ ಕಾರ್ಯಕ್ರಮದಿಂದ ಕೃಷಿಗೆ ಹಾಗೂ ಕುಡಿಯಲು ನೀರನ್ನು ಬಳಸಿಕೊಳ್ಳುವಂತಾಗುತ್ತದೆ. ಈ ಯೋಜನೆಯಿಂದ ಒಣಬೇಸಾಯ ಮಾಡುತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.Water conservation work is undertaken at the launch of a “waterproof” new concept.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.