ಉತ್ತಮ ಸಮಾಜಕ್ಕಾಗಿ

ಜಾÐನವಿಲ್ಲದೆ ಸಮಾಜ ಸುಸ್ಥಿರವಾಗಲಾರದು,” — ಶ್ರೀ. ಟಿ. ಜಿ. ಕೃಷ್ಣಭಟ್.

Without Jade, society can not be sustainable, "--- mr. T. G. Krishnabhat.

0

ಬೆಳಗಾವಿ:(news belgaum)ಭಾರತ ದೇಶವು ನೈತಿಕ, ಆಧ್ಯಾತ್ಮಿಕ, ಸಾಂಸ್ಕøತಿಕ ಪರಂಪರೆಯನ್ನು ಹೊಂದಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಶಿಕ್ಷಕರು ಸಮಾಜಕ್ಕೆ ಜವಾಬ್ದಾರಿಯುತ ಸೇವೆಯನ್ನು ಸಲ್ಲಿಸಬೇಕಾಗಿದೆ. ಜಾÐನವಿಲ್ಲದೆ ಸಮಾಜ ಸುಸ್ಥಿರವಾಗಲಾರದು, ಆದ್ದರಿಂದ ಶಿಕ್ಷಕ ತನ್ನ ಶೀಲ, ಗುಣ, ನಡತೆ, ಚಾರಿತ್ರ್ಯ , ನೈತಿಕತೆ ಮೊದಲಾದ ಗುಣಗಳೊಂದಿಗೆ ಮಕ್ಕಳಿಗೆ ಮಾದರಿ ಶಿಕ್ಷಕನಾಗಬೇಕಾಗಿದೆ ಎಂದು ನಿವೃತ್ತ ಪೋಲಿಸ್ ಕಮೀಷನರ್ ಶ್ರೀ.ಟಿ. ಜಿ. ಕೃಷ್ಣಭಟ್ಟರು ನುಡಿದರು.
ಅವರು ಇಂದು ಬೆಳಗಾವಿಯ ಎಸ್. ಕೆ.ಇ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡು ಮಾತನಾಡಿದರು. ಸತ್ಯ, ಜಾÐನ, ಧರ್ಮ, ಶಾಂತಿ, ಕ್ಷಮಾ, ಮೊದಲಾದವುಗಳೇ ಜೀವನ ಮೌಲ್ಯಗಳು.
News Belgaum-ಜಾÐನವಿಲ್ಲದೆ ಸಮಾಜ ಸುಸ್ಥಿರವಾಗಲಾರದು,” --- ಶ್ರೀ. ಟಿ. ಜಿ. ಕೃಷ್ಣಭಟ್. 1ಯಾರು ಇವುಗಳನ್ನು ಹೊಂದಿರುವುದಿಲ್ಲವೋ ಅವರು ಭೂಮಿಗೆ ಭಾರವಾಗಿರುತ್ತಾರೆ, ಇಂಥವರು ಮನುಷ್ಯರೂಪದ ಮೃಗಗಳಾಗಿರುತ್ತಾರೆ ಅಷ್ಟೇ. ಎಂದು ವೇದ, ಪುರಾಣ, ಭಾಗವತ, ಮಹಾಕಾವ್ಯ, ಶ್ಲೋಕ, ಶರಣರ, ದಾಸರ, ಕವಿಗಳ, ಕಾವ್ಯಗಳಿಂದ ನುಡಿಗಳನ್ನು ಪೊಂಖಾನುಪುಂಖವಾಗಿ ಉಲ್ಲೇಖಿಸಿ ಮನುಷ್ಯನ ನೈತೀಕ ಜೀವನದ ಮಹತ್ವವನ್ನು ತಿಳಿಸಿಕೊಟ್ಟರು.
ಗೌರವ ಅತಿಥಿಗಳಾಗಿ ಪಾಲ್ಗೋಂಡಿದ್ದ ರಾಣಿ ಪಾರ್ವತಿ ದೇವಿಯವರ ಮೋಮ್ಮಗ ಶ್ರೀ. ಖೇಮರಾಜ್ ಸಾವಂತ ಭೋಸಲೆ ಅವರು – “ನಮ್ಮದು ಮಾನವೀಯ ಮತ್ತು ಸಮಾಜಮುಖಿ ಧೋರಣೆಹೊಂದಿದ ರಾಜ ಮನೆತನ, ಈ ನಿಟ್ಟಿನಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವೈಸ್ ಚೇರಮನ್‍ರಾದ ಶ್ರೀ. ಎಸ್. ವಿ. ಶಾನಭಾಗ ಅವರು ವಹಿಸಿದ್ದರು. ಪ್ರಾರಂಭದಲ್ಲಿ ಕುಮಾರಿ. ಅನುಶಾ ಆಪ್ಟೆ ಸ್ವಾಗತಗೀತೆ ಹಾಡಿದರು. ತದನಂತರ ಇತ್ತೀಚೆಗೆ ತೀರಿಕೊಂಡ ರಾಣಿ ಪಾರ್ವತಿದೇವಿ ಅವರ ಆತ್ಮಕ್ಕೆ ಸಭೆಯು ಶ್ರಧ್ಧಾಂಜಲಿ ಸಲ್ಲಿಸಿತು. ಪ್ರೋ. ಎಸ್. ಎಸ್. ಶಿಂಧೆ ಅವರು ಸ್ವಾಗತ ಕೋರಿದರು. ಪ್ರಾಚಾರ್ಯೆ ಡಾ: ಅಚಲಾ ದೇಸಾಯಿ ಅವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ. ಲತಾ ಕಿತ್ತೂರ ಅವರು ಸಂಸ್ಥೆ ನಡೆದು ಬಂದದಾರಿಯನ್ನು ವಿವರಿಸಿದರು. ಶ್ರೀ. ಆರ್. ವ್ಹಿ. ಭಟ್ ವಂದಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಸೇವಂತಿಲಾಲ್ ಶಹಾ, ಕಾರ್ಯದರ್ಶಿಗಳಾದ ಶ್ರೀ. ಆರ್. ಬಿ. ದೇಶಪಾಂಡೆ, ಅವರು ಹಾಗೂ ಎಸ್. ಕೆ.ಇ. ಸಂಸ್ಥೆಯ ಎಲ್ಲ ಪಧಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.Without Jade, society can not be sustainable, “— mr. T. G. Krishnabhat.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.