ಉತ್ತಮ ಸಮಾಜಕ್ಕಾಗಿ

ರಾಮತೀರ್ಥ ನಗರ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮ:ಶಾಸಕ ಅನಿಲ ಬೆನಕೆ

Work on the settlement of Ramathirtha city problems: MLA Benak

0

ಬೆಳಗಾವಿ: (news belgaum)ರಾಮತೀರ್ಥ ನಗರ ಗಣೇಶ ವೃತ್ತದಲ್ಲಿ ನಾಗರಿಕ ಸಮಸ್ಯೆಗಳ ಇತ್ಯರ್ಥ ಸಭೆ ಶಾಸಕ ಅನಿಲ ಬೆನಕೆ ಅಧ್ಯಕ್ಷತೆಯಲ್ಲಿ ಪಾಲಿಕೆ-ಬುಡಾ ಅಧಿಕಾರಿಗಳ ಸಭೆ ನಡೆಯಿತು. ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳು ಏನೇನು ಆಗಿವೆ ಎಂದು ನಾಗರಿಕರು ಶಾಸಕರು & ಅಧಿಕಾರಿಗಳನ್ನು ತೀವೃವಾಗಿ ಪ್ರಶ್ನಿಸಿದರು.
News Belgaum-ರಾಮತೀರ್ಥ ನಗರ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮ:ಶಾಸಕ ಅನಿಲ ಬೆನಕೆ News Belgaum-ರಾಮತೀರ್ಥ ನಗರ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮ:ಶಾಸಕ ಅನಿಲ ಬೆನಕೆ 1 News Belgaum-ರಾಮತೀರ್ಥ ನಗರ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮ:ಶಾಸಕ ಅನಿಲ ಬೆನಕೆ 3ಸುಮಾರು ₹16 ಲಕ್ಷ ದಂಡ ಸ್ಮಾರ್ಟ್ ಸಿಟಿ ಕಂಪನಿಗೆ ದಂಡ ವಿಧಿಸಲಾಗಿದೆ ಎಂಬ ಮಾಹಿತಿ ನನಗಿದೆ. ಸ್ಮಾರ್ಟ್ ಸಿಟಿ ಕೆಲಸಗಳನ್ನು ಮೊದಲು ರಾಮತೀರ್ಥ ನಗರದಿಂದ ಪ್ರಾರಂಭಿಸಲು ಸಂಸದ ಸುರೇಶ ಅಂಗಡಿ ಕ್ರಮ ಕೈಗೊಂಡಿದ್ದರು. ಅವರ ಸೂಚನೆ ನಂತರವೂ ಅಭಿವೃದ್ಧಿ ಕೆಲಸ ಎಲ್ಲಿಗೆ ಬಂದಿದೆ ಎಂಬುವುದನ್ನು ಅಧಿಕಾರಿಗಳು ಜನತೆಗೆ ತಿಳಿಸಲಿ ಎಂದರು.
ಕೆರೆ ಅಭಿವೃದ್ಧಿಗೆ ಎರಡು ಸಲ ಹಣ:ಲೇಕ್ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿಯ ಹಣವೂ ಇದೆ. ಜತೆಗೆ ಬುಡಾ ಸಹ ಲೇಕ್ ಅಭಿವೃದ್ಧಿ ಹಣ ಸಿಗುತ್ತದೆ. ಎಲ್ಲಿ ಹೋಯ್ತು ಡಬಲ್ ಹಣ ಎಂದು ನಾಗರಿಕರು ಅಧಿಕಾರಿಗಳನ್ನು ಪ್ರಶ್ನಿಸಿದರು. ರಾಮತೀರ್ಥ ನಗರದಲ್ಲಿ ಹಿರಿಯ ನಾಗರಿಕರಿಗೆ ಜೂಡ್ರುವ ಬೆಂಚಗಳಿಲ್ಲ, ಬೀದಿದೀಪಗಳಿಲ್ಲ, ರಸ್ತೆಗಳು ಸರಿಯಾಗಿ ಇಲ್ಲ. ಅದರಲ್ಲೂ ಕೆಲವು ರಸ್ತೆಗಳು 20 ವರ್ಷಗಳಿಂದ ರಸ್ತೆಯೇ ನಿರ್ಮಿಸಿಲ್ಲ ಎಂದಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ರಾಮತೀರ್ಥ ನಗರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಎಂದು ಜನ ಆಗ್ರಹಿಸಿದರು.
ಬೀದಿ ದೀಪ, ರಸದತೆ, ಉದ್ಯಾನ, ಬೆಂಚ್ ಮತ್ತಿತರ ಸೌಲಭ್ಯಗಳನ್ನು ಆದ್ಯತೆ ಮೇಲೆ ಕೊಡಲಾಗುವುದು ಎಂದು ಎಂಜಿನೀಯರ್ ಆರ್. ಎಸ್. ನಾಯಕ ತಿಳಿಸಿದರು. ರಾಮತೀರ್ತ ನಗರ ರಹವಾಸಿಗಳ ಸಂಘ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15 ದಿನಗಳಲ್ಲಿ ಆದ್ಯತೆ ಮೇರೆಗೆ ರಹವಾಸಿಗಳ ಸಮಸ್ಯೆ ಬಗೆಹರಿಸಲು ಶ್ರಮಿಸುವೆ ಎಂದು ಶಾಸಕ ಅನಿಲ ಬೆನಕೆ ನಾಗರಿಕರಿಗೆ ಭರವಸೆ ನೀಡಿದರು. ಬುಡಾ ಸ್ವತಃ ತಾನೇ ಅಭಿವೃದ್ಧಿ ಮಾಡಲಿ ಇಲ್ಲವೇ ₹ 80 ಕೋಟಿ ಹಣ ಪಾಲಿಕೆಗೆ ಹಸ್ತಾಂತರ ನೀಡಲಿ. ಈ ಬಗ್ಗೆ ಬುಡಾ ಕಮಿಷ್ನರ್ ಜತೆಗೆ ಸಭೆ ನಡೆಸುತ್ತೇವೆ ಎಂದು ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ತಿಳಿಸಿದರು.
ಕಮಿಷ್ನರ್ ಕೃಷ್ಟೇಗೌಡ ತಾಯನ್ನವರ, ಆರ್, ಎಸ್. ನಾಯಕ, ಪರಿಸರ ಅಧಿಕಾರಿ ಉದಯಕುಮಾರ ಮತ್ತಿತರರು ಉಪಸ್ಥಿತರಿದ್ದರು.Work on the settlement of Ramathirtha city problems: MLA Benak

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.