ಉತ್ತಮ ಸಮಾಜಕ್ಕಾಗಿ

ವಿಶ್ವ ಜನಸಂಖ್ಯಾ ದಿನಾಚರಣೆ 2018

World Population Day 2018

0

ಬೆಳಗಾವಿ :(news belagavi ತಾಲೂಕಾ ಮಟ್ಟದ ಉದ್ಘಾಟನಾ ಸಮಾರಂಭ ಇಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಬೆಳಗಾವಿ ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ,ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಬೆಳಗಾವಿ ಹಾಗೂ ಗ್ರಾಮ ಪಂಚಾಯತ ಮುತಗಾ ಇವರ ಸಹಯೋಗದಲ್ಲಿ  ಬೆಳಗಾವಿ ತಾಲೂಕಾ ಮಟ್ಟದ ಉದ್ಘಾಟನಾ ಸಮಾರಂಭವು ವಿಶಾಲ ಮಂಗಲ ಕಾರ್ಯಲಯ ಮುತಗಾ ತಾಲೂಕ ಬೆಳಗಾವಿಯಲ್ಲಿ ನೆರವೇರಿತು. ಸಮಾರಂಭದ ಉದ್ಘಾಟನೆಯನ್ನು ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ಮಾನ್ಯ ಶಾಸಕರು ಬೆಳಗಾವಿ ಗ್ರಾಮೀಣ ಇವರು ನೆರವೇರಿಸಿ ವಿಶ್ವ ಆರೋಗ್ಯ ದಿನಾಚರಣೆ ಒಂದು ಮಹತ್ವದ ದಿನಾಚರಣೆಯಾಗಿದ್ದು ಇದು ನಿರಂತರವಾಗಿರಬೇಕು. ಗಂಡು ಹೆಣ್ಣು ಎಂಬ ಬೇದವಿಲ್ಲದೆ ಒಂದು ಅಥವಾ ಎರಡು ಮಕ್ಕಳನ್ನು ಹೊಂದುವಂತೆ ಸಾರ್ವಜನಿಕರಲ್ಲಿ ವಿನಂತಿಸಿ ಹೆಣ್ಣಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ ಹಲವಾರು ಉದಾರಣೆಗಳನ್ನು ನೀಡಿದರು.
ತಾಲೂಕಿನಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ  ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಾದ 1) ಶ್ರೀಮತಿ ರೂಪಾ ಎಸ್
ಕಲಕಾಂಬಕರ್ ಪ್ರಾ.ಆ.ಕೇಂದ್ರ ಮುತಗಾ 2) ಶ್ರಿಮತಿ ಯಲ್ಲವ್ವಾ ಕರೆಪ್ಪಾ ನಾಯ್ಕ ಪ್ರಾ.ಆ.ಕೇಂದ್ರ ಕಡೋಲಿ 3) ಶ್ರೀಮತಿ ಕಲ್ಪನಾ
ಘಾಟಿಗಸ್ತಿ ಪ್ರಾ.ಆ.ಕೇದ್ರ ಬೆಳಗುಂದಿ 4) ಶ್ರೀಮತಿ ಸುನಿತಾ ಪಾಟೀಲ ನಗರ ಪ್ರಾ.ಆ.ಕೇಂದ್ರ ಖಾಸಬಾಗ ಹಾಗೂ ಆರೋಗ್ಯ ಕಾರ್ಯಕರ್ತೆಯರಾದ 1) ಶ್ರೀಮತಿ ಎಸ್.ಎಸ್.ತಿಪ್ಪಣ್ಣವರ ಪ್ರಾ.ಆ.ಕೇಂದ್ರ ಮುತಗಾ 2) ಶ್ರೀಮತಿ ಸುಧಾ ಕಿಳಿಪುಟ್ಟಿ ಪ್ರಾ.ಆ.ಕೇಂದ್ರ ಯಳ್ಳೂರ 3) ಶ್ರೀಮತಿ ಎಸ್.ಆರ್ ಸುಳೆಗೆ ಪಾಟೀಲ ಪ್ರಾ.ಆ.ಕೇಂದ್ರ ಉಚಗಾಂವ 4) ಶ್ರೀ ಎಸ್.ಬಿ.ಮೇಳೆದ ಸಮುದಾಯ ಆರೋಗ್ಯ ಕೇಂದ್ರ ಹೀರೆಬಾಗೇವಾಡಿ 5) ಶ್ರೀಮತಿ ಭಾರತಿ ದುರಗೂಡೆ ಸಾ.ಸಿಂದೊಳ್ಳಿ ಹಾಗೂ ಡಾ.ಎಮ್.ವ್ಹಿ ಕಿವುಡಸಣ್ಣವರ ವೈದ್ಯಾಧಿಕಾರಿಗಳು ಪ್ರಾ.ಆ.ಕೇಂದ್ರ ಮುತಗಾ ಇವರಿಗೆ ಅಭಿನಂದನಾ ಪತ್ರ ನೀಡಿ ಮಾನ್ಯ ಶಸಕರು ಸತ್ಕರಿಸಿದರು.

ಶ್ರೀಮತಿ ಭಾರತಿ ದುರಗೂಡೆ ಕುಟುಂಬ ಕಲ್ಯಾಣ ಫಲಾನುಭವಿ ತನ್ನ ಅನುಬವಗಳನ್ನು ಹಂಚಿಕೊಂಡಳು . ಅತಿಥಿಗಳಾದ ಶ್ರೀ.ಶಂಕರಗೌಡ ಪಾಟೀಲ ಮಾನ್ಯ ಅಧ್ಯಕ್ಷರು ತಾಲೂಕ ಪಂಚಾಯತ ಬೆಳಗಾವಿ, ಶ್ರೀ ಕಾಸಿನಾಥ ದರಮೋಜಿ ತಾಲೂಕ
ಪಂಚಾಯತ ಸದಸ್ಯರು ಸಾಂಬ್ರಾ, ಡಾ.ಸಾವಿತ್ರಿ ಬೆಂಡಿಗೇರಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ, ವೇದಿಕೆ ಮೇಲೆ ಉಪಸ್ಥಿತರಿದ್ದರು
.
ಶ್ರೀಮತಿ ಮಂಗಲಾ ಕಂಪಿ ಗ್ರಾಮ ಪಂಚಾಯತ ಅಧ್ಯಕ್ಷರು ಮುತಗಾ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರು. ಪ್ರಾರಂಭದಲ್ಲಿ ಡಾ.ಸಂಜೀವ ನಾಂದ್ರೆ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ ಇವರು ಎಲ್ಲರಿಗೂ ಸ್ವಾಗತ ಕೋರಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಎಸ್.ಎಸ್.ತಿಪ್ಪಣ್ಣ್ನವರ ಪ್ರಾರ್ಥಿಸಿದರು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶ್ರೀ.ಸಿ,ಜಿ ಅಗ್ನಿಹೋತ್ರಿ, ಹಿರಿಯ ಆರೋಗ್ಯ ಸಹಾಯಕರು, ಕಾರ್ಯಕ್ರಮ ನಿರೂಪಿಸಿದರು. ಶ್ರೀ ಬಿ.ಪಿ ಯಲಿಗಾರ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಂದಿಸಿದರು. ಶ್ರೀ ವಿ.ಎಲ್ ಪಾತಲಿ ಹಾಗೂ ಶ್ರೀಮತಿ ಡಿ.ಟಿ ಕುಂದಗೋಳ ಕಾರ್ಯಕ್ರಮ ಸಂಘಟಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

 

Leave A Reply

 Click this button or press Ctrl+G to toggle between Kannada and English

Your email address will not be published.