ಉತ್ತಮ ಸಮಾಜಕ್ಕಾಗಿ

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

news belagavi

0

ಬೆಳಗಾವಿ:(news belgaum) ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ: : www.ssp.karnataka.gov.in ನಲ್ಲಿ ಅರ್ಜಿ ಸಲ್ಲಿಸಲು ಸಪ್ಟೆಂಬರ್ 30 ಕೊನೆಯ ದಿನವಾಗಿದೆ.
ಒಂದನೇ ತರಗತಿಯಿಂದ 10ನೇ ತರಗತಿವರೆಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹವಿರುತ್ತಾರೆ. ಕೇಂದ್ರ ಪುರಸ್ಕøತ ವಿದ್ಯಾರ್ಥಿ ವೇತನ ದರಗಳು 9 ರಿಂದ 10 ತರಗತಿ ಬಾಲಕ ಮತ್ತು ಬಾಲಕಿಯರಿಗೆ ರೂ. 2250 ಗಳು ಹಾಗೂ ರಾಜ್ಯ ತರಗತಿ 1 ರಿಂದ 5 ಬಾಲಕರಿಗೆ ರೂ. 1000 ಹಾಗೂ ಬಾಲಕಿಯರಿಗೆ 1100/, ತರಗತಿ 6 ರಿಂದ 7 ಬಾಲಕರಿಗೆ ರೂ. 1150 ಹಾಗೂ ಬಾಲಕಿಯರಿಗೆ 1250/, 8ನೇ ತರಗತಿ ಬಾಲಕರಿಗೆ ರೂ. 1250 ಹಾಗೂ ಬಾಲಕಿಯರಿಗೆ ರೂ. 1350/ ಗಳು.
ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಸ್ಯಾಟ್ಸ್-ಐಡಿ (SATS-ID) ಸ್ಯಾಟ್-ಐಟಿ ತಿಳಿಯಲು ವೆಬ್ ವಿಳಾಸ: http://sts.karnataka.gov.in  ವಿದ್ಯಾರ್ಥಿಯ ಆಧಾರ ಸಂಖ್ಯೆ, ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಪೋಷಕರ ಆಧಾರ ಸಂಖ್ಯೆ,ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆದಿದ್ದಲ್ಲಿ ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ (ಸಂಬಂಧಿಸಿದ ಇಲಾಖೆಯಿಂದ ಪಡೆದಿದ್ದು), ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪಡೆದಿದ್ದಲ್ಲಿ ಹಿಂದಿನ ಸಾಲಿನ ಅರ್ಜಿ ಸಂಖ್ಯೆ (ಸಂಬಂಧಿಸಿದ ಇಲಾಖೆಯಿಂದ ಪಡೆದಿದ್ದು), ಆಧಾರ ಸಂಖ್ಯೆ ಇಲ್ಲದಿದ್ದಲ್ಲಿ, ಆಧಾರ್ ನೊಂದಣಿ ಮಾಡಿಸಿದ ಇ.ಐ.ಡಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕಿನ ವಿಳಾಸ, ಪೋಷಕರ ಆಧಾರ್ ನಂಬರಗೆ ಲಿಂಕ್ ಮಾಡಿರುವ ಮೊಬೈಲ್ ನಂ ಹಾಗೂ ಭೌತಿಕ ಅನುಮತಿ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು: 1 ರಿಂದ 8ನೇ ತರಗತಿ ವಿದ್ಯಾರ್ಥಿ ವೇತನ ರೂ. 6 ಲಕ್ಷ ಹಾಘೂ 9 ರಿಂದ 10ನೇ ತರಗತಿ ವಿದ್ಯಾರ್ಥಿ ವೇತನ ರೂ. 2.50 ಲಕ್ಷ ವಾರ್ಷಿಕ ಆದಾಯ ಹೊಂದಿರಬೇಕು. ಫಲಾನುಭವಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಾಗಿರಬೇಕು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ವೆಬ್‍ಸೈಟ್  www.sw.kar.nic.inಸಂಪರ್ಕಿಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.