ಉತ್ತಮ ಸಮಾಜಕ್ಕಾಗಿ

ವಿಶ್ವಾಸ ಮತ: ಯಡಿಯೂರಪ್ಪ ಸೋತು ಜೆಡಿಎಸ್ ಕಾಂಗ್ರೆಸ್ ಸರಕಾರ ಬಂದರೂ ಹೆಚ್ಚು ದಿನ ತಾಳುವ ಸಾಧ್ಯತೆ ಕಡಿಮೆ!

Yeddyurappa loses vote share in JD (S) Even if the Congress government is coming, it will be more likely to last day!

0

.ವಿಶೇಷ ಬರಹಅಶೋಕ್ ಚಂದರಗಿ

ಬೆಳಗಾವಿ:(news belagavi) ರಾಜ್ಯದಲ್ಲಿಯ ಸದ್ಯದ ರಾಜಕೀಯ ಡೊಂಬರಾಟಕ್ಕೂ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೂ ನೇರ ಸಂಬಂಧವಿದೆ. ಇದು ಸ್ಪಟಿಕದಷ್ಟೇ ಸ್ಪಷ್ಟ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಇದು ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಬಿಜೆಪಿ ಇಲ್ಲಿ ಅಧಿಕಾರ ಹಿಡಿದರೇನೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಮುಕ್ಕಾಲು ಪಾಲನ್ನು ಗೆಲ್ಲಬಹುದಾಗಿದೆ. ಕಾಂಗ್ರೆಸ್ ಇಲ್ಲಿ ಮರುಜನ್ಮ ಪಡೆದರೇನೇ ಮುಂಬರುವ ಚುನಾವಣೆಯಲ್ಲಿ ಹೈಕಮಾಂಡಿಗೆ “ಬೆನ್ನೆಲುಬು” ಆಗಿ ನಿಲ್ಲಲು ಸಾಧ್ಯ.
ಇತ್ತೀಚಿನ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದು ಸ್ಪಷ್ಟ. ಜೆಡಿಎಸ್ ಗೆ ಎಷ್ಟು ಸ್ಥಾನಗಳು ಬರಬೇಕಿತ್ತೊ ಅಷ್ಟು ಬಂದಾಗಿದೆ. ಬಿಜೆಪಿಗೆ ಇನ್ನೊಂದಿಷ್ಟು ಸ್ಥಾನಗಳು ಬಂದಿದ್ದರೆ ಅದು ಸ್ವಂತ ಕಾಲ ಮೇಲೆ ಸರಕಾರ ರಚಿಸಬಹುದಿತ್ತು. ಆದರೆ ಅದಕ್ಕೆ ಎಂಟು ಸ್ಥಾನಗಳ ಕೊರತೆ ಉಂಟಾಗಿದ್ದರಿಂದಲೇ ಇಷ್ಟೊಂದು ಡೊಂಬರಾಟ ನಡೆಯುತ್ತಿದೆ. “ಮತದಾರರು ನಮಗೆ ಪ್ರತಿಪಕ್ಷ ಸ್ಥಾನದಲ್ಲಿ ಕೂಡಿಸಿದ್ದಾರೆ. ನಾವು ಅಲ್ಲಿಯೇ ಕೂಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರೆ ಅದರ ಪರಿಣಾಮವೇ ಬೇರೆಯಾಗುತ್ತಿತ್ತು.
News Belgaum-ವಿಶ್ವಾಸ ಮತ: ಯಡಿಯೂರಪ್ಪ ಸೋತು ಜೆಡಿಎಸ್ ಕಾಂಗ್ರೆಸ್ ಸರಕಾರ ಬಂದರೂ ಹೆಚ್ಚು ದಿನ  ತಾಳುವ ಸಾಧ್ಯತೆ ಕಡಿಮೆ! 1 News Belgaum-ವಿಶ್ವಾಸ ಮತ: ಯಡಿಯೂರಪ್ಪ ಸೋತು ಜೆಡಿಎಸ್ ಕಾಂಗ್ರೆಸ್ ಸರಕಾರ ಬಂದರೂ ಹೆಚ್ಚು ದಿನ  ತಾಳುವ ಸಾಧ್ಯತೆ ಕಡಿಮೆ! 2 News Belgaum-ವಿಶ್ವಾಸ ಮತ: ಯಡಿಯೂರಪ್ಪ ಸೋತು ಜೆಡಿಎಸ್ ಕಾಂಗ್ರೆಸ್ ಸರಕಾರ ಬಂದರೂ ಹೆಚ್ಚು ದಿನ  ತಾಳುವ ಸಾಧ್ಯತೆ ಕಡಿಮೆ! 3 News Belgaum-ವಿಶ್ವಾಸ ಮತ: ಯಡಿಯೂರಪ್ಪ ಸೋತು ಜೆಡಿಎಸ್ ಕಾಂಗ್ರೆಸ್ ಸರಕಾರ ಬಂದರೂ ಹೆಚ್ಚು ದಿನ  ತಾಳುವ ಸಾಧ್ಯತೆ ಕಡಿಮೆ! 4ಆದರೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಜೆಡಿಎಸ್ ನಾಯಕರು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಪರಸ್ಪರ ಕೈ ಜೋಡಿಸಿದ್ದು ಮತದಾರರಿಗೆ ಅಸಹ್ಯವೆನಿಸಿತು. ಚುನಾವಣೆ ಸಮಯದಲ್ಲಿ “ನೀ ‌‌ಕೆಟ್ಟ ನೀ ಕೆಟ್ಟ” ಎಂದು ಬೈದಾಡಿ,” ಇವರಪ್ಪನಾಣೆಗೂ ಕುಮಾರಸ್ವಾಮಿ ಸಿಎಮ್ ಆಗೋದಿಲ್ಲ” ಎಂದು ಸಿದ್ದು ಎಂದಿದ್ದು, ಸಿದ್ದರಾಮಯ್ಯ ಕುಡಿದ ಮತ್ತಿನಲ್ಲಿಯೇ ಮಾತನಾಡಿದ್ದಾನೆ ಎಂದು ಕುಮಾರಸ್ವಾಮಿ ಉಗಿದಿದ್ದು ಮತದಾರರ ಮನದಲ್ಲಿ ಇನ್ನೂ ಹಸಿಹಸಿಯಾಗಿಯೇ ಉಳಿದಿದೆ.
ಇಂಥ ಪರಿಸ್ಥಿತಿಯಲ್ಲಿಯೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಸುಪ್ರೀಮ್ ಕೋರ್ಟ ಆದೇಶದ ಮೇರೆಗೆ ಇದೇ ಶನಿವಾರ ಸಂಜೆ 4 ಗಂಟೆಗೆ ಅವರು ತಮಗಿರುವ ಬಹುಮತವನ್ನು ವಿಧಾನ ಸಭೆಯಲ್ಲಿ ಸಾಬೀತು ಮಾಡಬೇಕಾಗಿದೆ.
224 ಸದಸ್ಯ ಬಲದ ವಿಧಾನ ಸಭೆಯಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ಸದ್ಯ 222. ಸರಳ ಬಹುಮತಕ್ಕೆ 112 ಸದಸ್ಯರು ಬೇಕು. ಆದರೆ ಬಿಜೆಪಿಗೆ 104 ಸದಸ್ಯರ ಬಲವಿದೆ. ಇನ್ನು ಎಂಟು ಸದಸ್ಯರ ಬೆಂಬಲ ಸಿಕ್ಕರೆ ಮಾತ್ರ ಯಡಿಯೂರಪ್ಪ ಗೆಲ್ಲುತ್ತಾರೆ. ಸಿಗದಿದ್ದರೆ? ಸದನದಲ್ಲಿ ಹಾಜರಿರುವ ಸದಸ್ಯರಲ್ಲಿ ಸರಳ ಬಹುಮತ ಅವಶ್ಯ. ಈಗ ಬಿಜೆಪಿ ನಾಯಕರಿಗೆ ಇರುವ ಮಾರ್ಗವೆಂದರೆ 2008 ರಲ್ಲಿ ಅದು ನಡೆಸಿದ ಆಪರೇಶನ್ ಕಮಲ ಅಥವಾ ಶನಿವಾರದ ಅಧಿವೇಶನದಲ್ಲಿ ಹತ್ತೊ ಹದಿನೈದೊ ಸದಸ್ಯರನ್ನು ಗೈರುಹಾಜರಿ ಮಾಡಿಸುವದು. ಆದರೆ ಇದು ಸಾಧ್ಯವೆ?.
News Belgaum-ವಿಶ್ವಾಸ ಮತ: ಯಡಿಯೂರಪ್ಪ ಸೋತು ಜೆಡಿಎಸ್ ಕಾಂಗ್ರೆಸ್ ಸರಕಾರ ಬಂದರೂ ಹೆಚ್ಚು ದಿನ  ತಾಳುವ ಸಾಧ್ಯತೆ ಕಡಿಮೆ!ಯಡಿಯೂರಪ್ಪ ಅವರು ವಿಶ್ವಾಸ ಮತ ಗಳಿಸುವಲ್ಲಿ ವಿಫಲರಾದಲ್ಲಿ ರಾಜ್ಯಪಾಲರು ಜೆಡಿಎಸ್ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿರುವ ಕುಮಾರಸ್ವಾಮಿ ಅವರನ್ನು ಸರಕಾರ ರಚಿಸಲು ಆಹ್ವಾನಿಸಬೇಕಾಗುತ್ತದೆ. ಅವರಿಬ್ಬರ ಸಂಖ್ಯಾ ಬಲ116. ಇವರಿಬ್ಬರೂ ಸೇರಿ ಸರಕಾರ ರಚಿಸಿದರೂ ಅದು ಎಷ್ಟು ದಿನ ತಾಳಬಹುದು? ಆ ಸರಕಾರ ಸುರಳಿತವಾಗಿ ನಡೆಯಲು ಕೇಂದ್ರದಲ್ಲಿರುವ ಮೋದಿ ಸರಕಾರ ಬಿಡುವದೆ ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಶಾಸಕರ ಪಟ್ಟಿಯಲ್ಲಿರುವ ಶಾಸಕರು ಕೊನೆಯ ಘಳಿಗೆಯವರೆಗೆ ಗಟ್ಟಿಯಾಗಿ ಉಳಿಯುತ್ತಾರೆಂಬ ಬಗ್ಗೆ ಈಗ ಶಂಕೆ ವ್ಯಕ್ತಪಡಿಸಲಾಗುತ್ತಿದೆ.
ಸದ್ಯ ಮೋದಿ ಸರಕಾರ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ರಚಿಸಲೇಬೇಕೆಂದು ಎಷ್ಟೊಂದು ಹಟತೊಟ್ಟಿದೆಯೆಂದರೆ ಸ್ವತಃ ಮೋದಿಯವರೇ ಹೇಳಿಕೆ ನೀಡಿ,”ಯಾವದೇ ಪರಿಸ್ಥಿತಿಯಲ್ಲೂ ಕರ್ನಾಟಕದಲ್ಲಿ ಜೆಡಿಎಸ್ ಕಾಂಗ್ರೆಸ್ ಸರಕಾರ ರಚನೆಗೆ ಅವಕಾಶ ಕೊಡುವದಿಲ್ಲ” ಎಂದು ಘೋಷಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿನ ಶಾಂಗ್ರಿಲಾ ಹೊಟೆಲ್ ಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಿದ್ದು, ಜೆಡಿಎಸ್ ಕಾಂಗ್ರೆಸ್ ಶಾಸಕರು ಕೊಚ್ಚಿಗೆ ಪ್ರಯಾಣಿಸಲು ಏರಲಿದ್ದ ಮೂರು ವಿಮಾನಗಳ ಸೇವೆಯನ್ನು ಕೇಂದ್ರ ಸರಕಾರ ಧಿಡೀರ್ ರದ್ದುಗೊಳಿಸಿದ್ದು, ರಾಜಭವನದ ಎದುರು ಧರಣಿ ನಡೆಸಿದ ಶಾಸಕರ ಬಂದೋಬಸ್ತ ಗೆ ಪಿಎಸ್ ಐ ಗಳನ್ನು ನಿಯುಕ್ತಿಗೊಳಿಸಿದ್ದ ಎಸ್ ಪಿ.ಒಬ್ವರನ್ನು ವರ್ಗಾವಣೆ ಮಾಡಿದ್ದನ್ನು ನೋಡಿದರೆ ಪ್ರಸಕ್ತ ರಾಜಕೀಯವು ಯಾವ ಮಟ್ಟಕ್ಕಾದರೂ ಇಳಿಯುವ ಸಾಧ್ಯತೆಯಿದೆ ಎಂದೆನಿಸುತ್ತಿದೆ.
ರಾಜ್ಯದಲ್ಲಿ ತನ್ನ ಸರಕಾರ ರಚನೆಯಾಗದಿದ್ದರೆ ಇಲ್ಲಿ ಸಂವಿಧಾನದ 356 ನೇ ಕಲಮಿನನ್ವಯ ರಾಷ್ಟ್ರಪತಿ ಆಳ್ವಿಕೆ ಜಾರಿಯ ಮಾಡಲೂ ಸಹ ಮೋದಿ ಸರಕಾರ ಯತ್ನಿಸಬಹುದು. ಆದರೆ ಜೆಡಿಎಸ್ ಕಾಂಗ್ರೆಸ್ ಆಂತರಿಕ ಜಗಳವನ್ನೇ ಇದಕ್ಕಾಗಿ ಉಪಯೋಗಿಸಬೇಕಾಗುತ್ತದೆ. ವಿಧಾನ ಸಭೆಯಲ್ಲಿಯೇ ಅಂಥ ಸರಕಾರಕ್ಕೆ ಬಹುಮತವಿಲ್ಲ ಎಂದು ಸಾಬೀತು ಮಾಡಬೇಕಾಗುತ್ತದೆ. ವಾಮ ಮಾರ್ಗ ಅನುಸರಿಸಿದರೆ ಮತ್ತೆ ಸುಪ್ರೀಮ್ ಕೋರ್ಟ ಬಾಗಿಲನ್ನು ತಟ್ಟುವವರು ಇದ್ದೇ ಇದ್ದಾರೆ.
ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿರುವ ಕ್ರಮವು ಗೋವೆ ಮತ್ತಿತರ ರಾಜ್ಯಗಳಲ್ಲಿಯ ಅಧಿಕಾರ ವಂಚಿತ ಪಕ್ಷಗಳನ್ನು ಎಬ್ಬಿಸಿ ಕೂಡಿಸಿದೆ. ಇದು ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ತಲೆನೋವಾಗುವ ಸಾಧ್ಯತೆಯೂ ಇದೆ. ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ವಿಶ್ವಾಸ ಮತ ಸಾಬೀತುಗೊಳಿಸಲು 15 ದಿನಗಳ ಕಾಲಾವಕಾಶ ನೀಡಿದ್ದು ತಪ್ಪೆಂದು ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠವು ಘೋಷಿಸಿ ಕೇವಲ 28 ಗಂಟೆಗಳ ಅವಧಿ ನೀಡಿದ್ದೂ ಸಹ ಒಂದು ಐತಿಹಾಸಿಕ ತೀರ್ಪಾಗಿದೆ.
1994 ರ ಮಾರ್ಚ 11ರಂದು, ಎಸ್.ಆರ್.ಬೊಮ್ಮಾಯಿ ವರ್ಸಿಸ್ ಯೂನಿಯನ್ ಗವ್ಹರ್ನಮೆಂಟ್ ಪ್ರಕರಣದಲ್ಲಿ, ಸುಪ್ರೀಮ್ ಕೋರ್ಟು ನೀಡಿದ ತೀರ್ಪು ರಾಜ್ಯಪಾಲರಿಗೆ “ಬೈಬಲ್” ಎನಿಸಿದ್ದರೆ, ಈಗ “ವಿಶ್ವಾಸ ಮತ ಸಾಬೀತಿಗೆ ನೀಡಿದ ಕಾಲಾವಕಾಶ” ತೀರ್ಪು ರಾಜ್ಯಪಾಲರ ಪರಮಾಧಿಕಾರವನ್ನು ಕಟ್ಟಿ ಹಾಕಿದಂತಾಗಿದೆ. ರಾಜ್ಯಪಾಲರು ಇನ್ನು ಮುಂದೆ ಕೇಂದ್ರ ಸರಕಾರದಲ್ಲಿರುವ ನಾಯಕರ ಅಣತಿಯಂತೆ ಕುಣಿಯಲಾಗದು.
1994 ರ ವಿಧಾನ ಸಭೆ ಚುನಾವಣೆಯಲ್ಲಿ ಜನತಾ ದಳವು 115 ಸ್ಥಾನಗಳನ್ನು ಗಳಿಸಿದಾಗ ದೇವೇಗೌಡರನ್ನು ಸಿಎಮ್ ಗದ್ದುಗೆಗೆ ಕೂಡಿಸಲು ರಾಮಕೃಷ್ಣ ಹೆಗಡೆಯವರು ಹಿಂದೇಟು ಹಾಕಿದರು. ಲಕ್ಷಾಂತರ ಒಕ್ಕಲಿಗರು ವಿಧಾನ ಸೌಧದ ಮುಂದೆ ಸೇರಿದರು. ಜನತಾ ದಳದ ಉತ್ತರ ಕರ್ನಾಟಕದ ಲಿಂಗಾಯತ ಶಾಸಕರನ್ನು ರೇಸ್ ಕೋರ್ಸ ರಸ್ತೆಯ ಜನತಾ ಪಕ್ಷದೆದುರೇ ಜಗ್ಗಾಡಲಾಯಿತು. ವಿಧಾನ ಸೌಧ ಪ್ರವೇಶಿಸಿದಲ್ಲೂ ಭಾರೀ ದೊಂಬಿ ನಡೆಯಿತು. ಹೆಗಡೆ ಬೆಂಬಲಿಗ ಶಾಸಕರು ವಿಧಾನ ಸೌಧದ ಶೌಚಾಲಯದಲ್ಲಿ ಅಡಗಿ ಕುಳಿತ ಘಟನೆಗಳೂ ನಡೆದವು. ಹೆಗಡೆಯವರು ವಿಧಾನ ಸೌಧದ ಮುಂಭಾಗಕ್ಕೆ ಬಂದಾಗ ಮಹಿಳೆಯೊಬ್ಬಳು ಅವರ ಹೆಗಲ ಮೇಲಿನ ಶಾಲನ್ನು ಕಿತ್ತುಕೊಂಡಳಲ್ಲದೇ ಚಪ್ಪಲಿಯನ್ನು ಅವರ ಮೇಲೆ ಎಸೆದಳು. ಅಂದಿನ ಘಟನೆ ಒಕ್ಕಲಿಗರು ಮತ್ತು ಲಿಂಗಾಯತರ ನಡುವಣ ಸಂಘರ್ಷವಾಗಿತ್ತು. ಕೊನೆಗೆ ಆದಿಚುಂಚನಗಿರಿ ಒಕ್ಕಲಿಗ ಸ್ವಾಮಿಗಳು ಮಧ್ಯ ಪ್ರವೇಶಿಸಿ,”ದೇವೇಗೌಡರನ್ನು ಮುಖ್ಯಮಂತ್ರಿ ಮಾಡದಿದ್ದರೆ ಅವರನ್ನು ರಾಜಕೀಯ ನಿವೃತ್ತಿ ಮಾಡಿಸುತ್ತೇವೆ” ಎಂದು ಸ್ವಾಮೀಜಿಯವರು ಹೆಗಡೆಯವರಿಗೆ ತಿಳಿಸಿದಾಗಲೇ ದೇವೇಗೌಡರಿಗೆ ಸಿಎಮ್ ಗದ್ದುಗೆ ಸಿಕ್ಕಿತು!
ಈಗ ಸಿಎಮ್ ಗದ್ದುಗೆಗೆ ಕುಳಿತಿರುವ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಲ್ಲಲು ಕಾಂಗ್ರೆಸ್ ನಲ್ಲಿಯ ಲಿಂಗಾಯತ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ. ಯಡಿಯೂರಪ್ಪ ಸಂಭವನಿಯ ಪದಚ್ಯುತಿಯು ಲಿಂಗಾಯತ ಮುಖ್ಯಮಂತ್ರಿಯ ಪದಚ್ಯುತಿ ಎಂದು ಬಿಂಬಿಸುವ ಯತ್ನ ನಡೆದಿದೆಯಾದರೂ 1994 ರಲ್ಲಿಯ ಒಕ್ಕಲಿಗರ “ಬಿರುಗಾಳಿ” ಸದ್ಯ ಲಿಂಗಾಯತರ ಒಲಯದಲ್ಲಿ ಕಾಣುತ್ತಿಲ್ಲ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.