ಉತ್ತಮ ಸಮಾಜಕ್ಕಾಗಿ

ಯುವಕರ ಐಕಾನ್ ಸ್ವಾಮಿ ವಿವೇಕಾನಂದ ಪ್ರೊ. ಕೆ.ಆರ್.ಡೊಣವಾಡ ಹೇಳಿದರು.

0

ಬೆಳಗಾವಿ,: tarunkranti  ಕಲ್ಲೋಳಿ (ತಾ: ಮೂಡಲಗಿ, ಜಿ:ಬೆಳಗಾವಿ) ಯುವ ಜನಾಂಗ ನಮ್ಮ ದೇಶದ ಆಸ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿ ಸಿಡಿಲಬ್ಬರದ ಮರಿಯಾಗಿ ಶಾಂತಿ ಸೌಹಾರ್ಧತೆಯಿಂದ ಬದುಕಿದ ಭಾರತ ಜನತೆಗೆ ಒಳ್ಳೆಯ ಸಂದೇಶ ನೀಡಿದರು. ಶಿಕ್ಷಣವೆಂದರೆ ನಮ್ಮೊಳಗಿರುವ ಅನಾವರಣ ಶಿಕ್ಷಣವೆಂದರೆ ಕೇವಲ ವಿಷಯವಲ್ಲ ಜ್ಞಾನ ಸಂಪತ್ತು ಎಂದು ವಿವೇಕಾನಂದರ ಆದರ್ಶ ಮತ್ತು ಅವರ ಸಾಮಾಜಿಕ ಕಾರ್ಯ ಚಟುವಟಿಕೆಗಳು ಯುವಕರಿಗೆ ದಾರಿ ದೀಪವಾಗಿವೆ ಎಂದು ಪ್ರೊ. ಕೆ.ಆರ್.ಡೊಣವಾಡ ಹೇಳಿದರು.
ಅವರು ಕಲ್ಲೋಳಿಯ ಎಸ್.ಆರ್.ಇ.ಎಸ್ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ, ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಜೈ ಹನುಮಾನ ಸಮಾಜ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ದಿವ್ಯ ಚೇತನ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಯುವದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗತ್ತಿಗೆ ಭಾರತ ಆಧ್ಯಾತ್ಮಿಕ ಪ್ರಪಂಚಕ್ಕೆ ಸಾವಿರಾರು ಮಹಾನ್ ಪುರುಷರನ್ನು ಕೊಡುಗೆಯಾಗಿ ನೀಡಿದೆ ಎಂದರು.
ಯುವಕರ ಐಕಾನ್ ಸ್ವಾಮಿ ವಿವೇಕಾನಂದ ಪ್ರೊ. ಕೆ.ಆರ್.ಡೊಣವಾಡ ಹೇಳಿದರು.- Tarun krantiಕಾರ್ಯಕ್ರಮದ ಉದ್ದೇಶದ ಕುರಿತಾಗಿ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ, ಎಸ್. ಎಮ್. ನಿಂಗನೂರ ಅವರು ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಗಣೇಶ ನಾಯಿಕ ಮಾತನಾಡಿ, ಪರಿಪೂರ್ಣತೆ ಎಂಬುದು ಮನುಷ್ಯನಲ್ಲಿ ಅಡಗಿದೆ ಸುಪ್ತ ಚೇತನಗಳಿಂದ ಅದು ಹೊರಹೊಮ್ಮುತ್ತದೆ. ಹಿಂದೂ ಧರ್ಮದ ಶ್ರೇಷ್ಠತೆಯ ಕುರಿತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಧರ್ಮವೇ ಶಿಕ್ಷಣದ ಕೇಂದ್ರವೆಂದು ಹೇಳುವದರ ಮೂಲಕ ವಿವೇಕಾನಂದರನ್ನು ಕುರಿತು ಸ್ವ ರಚಿತ ಕವನ ವಾಚನ ಮಾಡಿದರು.
ಶಿಕ್ಷಣದಿಂದಲೇ ಸಂಸ್ಕøತಿ ಬೆಳೆಯಬೇಕು. ವಿದ್ಯಾಭ್ಯಾಸವೆಂದರೆ ನಮ್ಮೊಳಗಿರುವ ಪರಿಪೂರ್ಣತೆಯ ಅಭಿವ್ಯಕ್ತಿ ಮತ್ತು ಸ್ವಾಮಿ ವಿವೇಕಾನಂದರ ಆದರ್ಶ ಬದುಕು ಯುವ ಜನಾಂಗ ಅಳವಡಿಸಿಕೊಂಡು ಮಾದರಿಯ ದೇಶವನ್ನಾಗಿ ಮಾಡುವುದು ಯುವಕರ ಕೈಯಲ್ಲಿದೆ ಎಂದು ಪ್ರೊ. ಎಸ್. ಎಂ. ಐಹೊಳೆಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಅವರು ಮಾತನಾಡಿ, ವಿವೇಕಾನಂದರು ಯುವಕರ ಕಣ್ಮನಿ. ಮಹಾ ಮೇಧಾವಿ, ಅಪಾರ ದೇಶಭಕ್ತ. ತಮ್ಮ ಉಪನ್ಯಾಸಗಳಲ್ಲಿ ಭಾರತದ ಸಂಸ್ಕøತಿ ಹಾಗೂ ಯುವಕರ ಬಗ್ಗೆ ಮಾತನಾಡುತ್ತಿದ್ದರು. ಅವರ ಜೀವನ ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು. ಭಾರತವನ್ನು ಸರ್ವಶಕ್ತ ರಾಷ್ಟ್ರವನ್ನಾಗಿ ಮಾಡುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಬಿ.ಕುಲಮೂರ, ಎಸ್.ವಾಯ್.ಕಾಳೆ, ಬಿ.ಎ.ದೇಸಾಯಿ, ಆರ್.ಎಸ್.ಪಂಡಿತ, ವಿಲಾಸ ಕೆÉಳಗಡೆ, ಶ್ರೀಮತಿ ಎಸ್.ಎನ್.ಹಿರೇಮಠ, ಬಿ.ಬಿ.ವಾಲಿ, ಬಿ.ಕೆ.ಸೊಂಟನವರ, ಪರಶುರಾಮ ಇಮಡೇರ, ಆರ್.ಎ.ಮೇತ್ರಿ, ಬಿ.ಎಮ್.ಶಿಗೀಹಳ್ಳಿ, ಎನ್.ಎಸ್.ಪಾಟೀಲ, ಎಮ್.ಎಸ್.ಗೊರಗುದ್ದಿ ಮುಂತಾದವರು ಹಾಜರಿದ್ದರು.

ಪ್ರೀತಿ ಪಟ್ಟಣಶಟ್ಟಿ ಪ್ರಾರ್ಥಿಸಿದರು ಪ್ರೊ. ಕೆ. ಎಸ್. ಪರವ್ವಗೋಳ ನಿರೂಪಿಸಿದರು, ಪ್ರೊ. ಡಿ. ಎಸ್. ಹುಗ್ಗಿ ವಂದಿಸಿದರು, ಸರ್ವ ಬೋದಕ ಬೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

belgaumnews   Youth icon Swami Vivekananda Pro. KR Donovada said.

Leave A Reply

 Click this button or press Ctrl+G to toggle between Kannada and English

Your email address will not be published.