ಉತ್ತಮ ಸಮಾಜಕ್ಕಾಗಿ

ಯುವ ಜನಾಂಗ: ದೇಶದ ಆಶಯ ಅಭಿವೃದ್ಧಿಗೆ ತಳಹದಿ: ಪ್ರೊ. ಸಹಸ್ರಬುದ್ಧೆ

0

ಬೆಳಗಾವಿ: ಜಗತ್ತಿನಲ್ಲಿ ಭಾರತವೊಂದೇ ಹೆಚ್ಚಿನ ಯುವ ಜನಾಂಗ ಹೊಂದಿದ ರಾಷ್ಟ್ರ ಎಂದು All India Council of Technical Education ಮುಖ್ಯಸ್ಥ ಪ್ರೊ. ಅನಿಲ ಡಿ. ಸಹಸ್ರಬುದ್ಧೆ ಅಭಿಪ್ರಾಯಪಟ್ಟಿದ್ದಾರೆ. ವಿಟಿಯು 17 ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರ್ ಆಫ್ ಸೈನ್ಸ್ ಸ್ವೀಕರಿಸಿ ಮಾತನಾಡಿ ದೇಶದ ಜನಸಂಖ್ಯೆಯ ಶೇ. 25ರಷ್ಟು 25ರೊಳಗಿನ ಪ್ರಾಯದವರು. ಭಾರತ ತನ್ನ ಅಭಿವೃದ್ಧಿ ಜತೆಗೆ ಜಗತ್ತಿನ ಅವಶ್ಯಕತೆಗಳಿಗೆ ಯುವ ಸಂಪನ್ಮೂಲ ಬಳಸಬೇಕಿದೆ ಎಂದು ಕರೆ ನೀಡಿದರು. ಸರ್ವೇ ಜನಹಃ ಸುಖಿನೋ ಭವಂತು ಎಂಬ ಪುರಾತನ ದೇಶಿ ಆಶಯದಂತೆ ಇಂದಿನ ಯುವ ಜನಾಂಗ ನಡೆದುಕೊಳ್ಳಬೇಕಿದೆ.

ಯುವ ಜನಾಂಗ: ದೇಶದ ಆಶಯ ಅಭಿವೃದ್ಧಿಗೆ ತಳಹದಿ: ಪ್ರೊ. ಸಹಸ್ರಬುದ್ಧೆ- Tarun kranti6ನೇ ಶತಮಾನದ ತೈತ್ರೀಯ ಉಪನಿಷದ್ ಪದವಿ ಹೊಂದಿದ ವಿದ್ಯಾರ್ಥಿಗಳ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಬಹುಹಿಂದೆಯೇ ಹೇಳಿದೆ. ಸತ್ಯ, ಧರ್ಮ, ಸಂಸ್ಕಾರ, ಪರಸ್ಪರರ ಬಗ್ಗೆ ಗೌರವ, ಸ್ವ ಆರೋಗ್ಯ ಕಾಳಜಿ ಇಂದಿನ ಅಗತ್ಯಗಳಲ್ಲೊಂದು ಎಂದರು. ಸ್ಕಿಲ್ ಇಂಡಿಯಾ, ಕ್ಲೀನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಉನ್ನತ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ ಸೇರಿ ಇತರ ಕಾರ್ಯಕ್ರಮಗಳು ಯುವ ಜನತೆಯ ಮೇಲೆ ವಿಶ್ವಾಸವಿಟ್ಟು ಸರಕಾರಗಳು ಕೊಟ್ಟ ಕಾರ್ಯಕ್ರಮಗಳು, ಇವುಗಳಿಗೆ ಯಶಸ್ಸು ಸಿಗಬೇಕು ಎಂದರು. ಉತ್ತಮ ಉದ್ದೇಶದ ಜೀವನವಾಗಿ ಬದಲಿಸಿಕೊಳ್ಳಬೇಕು. ಅದರಿಂದ ನೀವು ಹೆಮ್ಮೆ ಪಡುವ ಹುದ್ದೆ ಪಡೆದುಕೊಳ್ಳುತ್ತೀರಿ( You will be Earning the Place of Pride.) ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.