ಉತ್ತಮ ಸಮಾಜಕ್ಕಾಗಿ

ಜಿಪಂ. ಸಾಮಾನ್ಯ ಸಭೆ ಕೋಲಾಹಲ: ಸಮಸ್ಯೆ ಎತ್ತಿದ ರೈತನನ್ನು ಹೊರಹಾಕಲು ಪೀಕಲಾಟ

Zip. General Meeting Fraud: Peak to eliminate the farmer who raised the problem

0

ಬೆಳಗಾವಿ:(news belgaum) ಜಿಲ್ಲೆಯ ಜಿಪಂ.ಗೆ ಬಂದಿರುವ ₹706 ಕೋಟಿಯಲ್ಲಿ ₹300 ಕೋಟಿ ಹಣ ಸಿಬ್ಬಂಧಿ ಸಂಬಳಕ್ಕೆ ಹೋಗುತ್ತಿದ್ದು ಉಳಿದ ಹಣವನ್ನು ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಜಿಪಂ. ಸಿಇಓ ಆರ್. ರಾಮಚಂದ್ರನ್ ತಿಳಿಸಿದರು. ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಧಾನಕ್ಕೆ ಸಿಇಓ ಉತ್ತರಿಸಿದರು

.
₹706 ಕೋಟಿ ಹಣದ ಅನುಮೋದನೆ ಮಾಡಿ ಕಳುಹಿಸಿದ ನಂತರವೇ ಹಣ ಖರ್ಚು ಮಾಡಲಾಗುತ್ತದೆ. 949 ಲಕ್ಷ ನಾಗರಿಕ ಕಾಮಗಾರಿಗೆ ಹಣ ಬರುತ್ತದೆ ಎಂದು ಡಿಎಸ್ ಮುಳ್ಳಳ್ಳಿ ಸಭೆಗೆ ಮಾಹಿತಿ ನೀಡಿದರು. 706 ಕೋಟಿ ಹಣಕ್ಕೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಸಮಸ್ಯೆ ಎತ್ತಿದ ರೈತನನ್ನು ಹೊರಹಾಕುವಂತೆ ಗದ್ದಲ, ಕೋಲಾಹಲ:ಈ ವೇಳೆ ರೈತ ಸಂಘಟನೆಯ ಮುಖಂಡ ಸೋಮು ಐನಾಪುರ ರೈತರೊಂದಿಗೆ ಭಾಗವಹಿಸಿ ತಮ್ಮ ಸಮಸ್ಯೆಗಳ ಬಗ್ಗೆ ಮೈಕ್ ಪಡೆದು ಹೇಳಲೆತ್ನಿಸಿದಾಗ ಗದ್ದಲ ಪ್ರಾರಂಭವಾಯಿತು.
ರೈತರ ಸಮಸ್ಯೆಗಳ ಬಗ್ಗೆ ಹೇಳಲು ಅನುವು ಮಾಡಬೇಕು, ಯಾವುದೇ ಕಾರಣಕ್ಕೂ ನಾನು ಹೊರ ಹೋಗುವುದಿಲ್ಲ ಎಂದು ಪಟ್ಟು ಹಿಡಿದಾಗ ಪೊಲೀಸ್ ಪೆದೆ ಬಂದು ರೈತ ಮುಖಂಡನನ್ನು ಹೊರ ಕಳುಹಿಸಲು ಯತ್ನಿಸಿ ವಿಫಲರಾದರು.
ನಂತರ ಸ್ವತಃ ಜಿಪಂ. ಅಧ್ಯಕ್ಷೆ ಸ್ಟೇಜನಿಂದ ಇಳಿದು ಬಂದು ರೈತ ಮುಖಂಡನನ್ನು ಸಮಾಧಾನ ಪಡಿಸಿ ಕೈ ಮುಗಿದು ಬೇಡಿಕೊಂಡರು ರೈತ ಮುಖಂಡ ಹೊರ ಹೋಗಲಿಲ್ಲ. ಈ ಮಧ್ಯೆ ಹಲವು ಜಿಪಂ. ಸದಸ್ಯರು ರೈತಮುಖಂಡನನ್ನು ಹೊರಕಳುಹಿಸಲು ಪ್ರಯತ್ನಿಸಿದರು. ನಂತರ ಎಲ್ಲ ಸದಸ್ಯರು ಸೇರಿ ರೈತ ಮುಖಂಡನನ್ನು ಹೊರ ಹಾಕಲು ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರು. ನನ್ನನ್ನು ಜೈಲಿಗರ ಹಾಕಲಿ ಆದರೆ ನಾನು ಸಭೆಯಿಂದ ಹೊರ ಹೋಗಲಾರೆ ಎಂದು ಪಟ್ಟು ಹಿಡಿದ. ಜಿಪಂ. ಅಧ್ಯಕ್ಷೆ ಆಶಾ ಐಹೊಳಿ ರೂಲಿಂಗ್ ನೀಡಲು ಬಹಳ ವಿಚಾರಿಸಿ ಮುಂದಾದರು.
ಜಿಪಂ.ಸದಸ್ಯರು ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಅದಕ್ಕಾಗಿ ನಾನು ಸಭೆಯಲ್ಲಿ ಬಂದು ಪ್ರಸ್ತಾಪ ಎತ್ತಿದ್ದೇನೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸೋಮು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಕೊನೆಗೆ ಸಿಇಓ ಆರ್. ರಾಮಚಂದ್ರನ್ ರೈತರ ಬಳಿ ಆಗಮಿಸಿ ಮನವಿ ಮಾಡಿ ಸಮಸ್ಯೆಗಳ ಬಗೆಹರಿಸುವ ವಾಗ್ದಾಣ ನೀಡಿದಾಗ ರೈತ ಸಮಾಧಾನದಿಂದ ಹೊರ ನಡೆದ.Zip. General Meeting Fraud: Peak to eliminate the farmer who raised the problem

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.