ಉತ್ತಮ ಸಮಾಜಕ್ಕಾಗಿ

ಜಿಪಂ ಸ್ಥಾಯಿ ಸಮಿತಿ ಚುನಾವಣೆ: ಅಧ್ಯಕ್ಷ – ಸದಸ್ಯರ ಅವಿರೋಧ ಆಯ್ಕೆ

ZP Standing Committee Election : President - member unanimous choice

0

ಬೆಳಗಾವಿ:(news belagaviಜಿಲ್ಲಾ ಪಂಚಾಯತ ಎರಡನೇ ಅವಧಿಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳ ಆಯ್ಕೆಗೆ ಇವತ್ತು ಜರುಗಿದ ಚುನಾವಣೆಯಲ್ಲಿ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.                                         ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಮೇಶ ಪರಶುರಾಮ ಗೋರಲ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಂಕರ ಭರಮಪ್ಪಾ ಮಾಡಲಗಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಶೈಲಜಾ ವಿದ್ಯಾಧರ ಕಾಗೆ ಅವರು ಅವಿರೋಧವಾಗಿ ಆಯ್ಕೆಯಾದರು.

ವಿವಿಧ ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆಯಾದ ಸದಸ್ಯರ ವಿವರ ಇಂತಿದೆ:
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ:                                                                                                                              ರಮೇಶ ಪರಶುರಾಮ ಗೋರಲ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ರೇಣಪ್ಪ ಫಕೀರಪ್ಪ ಸೋಮಗೊಂಡ, ಮಂಜುಳಾ ವಿಠ್ಠಲ ಭೈರಣ್ಣವರ, ನಿಂಗಪ್ಪ ರಾಮಪ್ಪ ಪಕಾಂಡಿ, ಮಾಧುರಿ ಬಾಬಾಸಾಹೇಬ ಶಿಂದೆ, ರಾಮಪ್ಪ ಬಸವಣ್ಣೆ ಸುಂಬಳಿ, ಶೈಲಜಾ ವಿದ್ಯಾಧರ ಕಾಗೆ ಅಯ್ಕೆಯಾದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ:
ಶಂಕರ ಭರಮಪ್ಪಾ ಮಾಡಲಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ಶಾಂತಾ ಮಾರುತಿ ಜೈನೋಜಿ, ಕೊಪ್ಪದ ಗೋವಿಂದ ಬೀಮಪ್ಪ, ಶ್ರೀಮತಿ ಉಗಳೆ ಸುಮಿತ್ರಾ ದಿಲೀಪಕುಮಾರ, ಸಿದ್ದಗೌಡ ಬಾಬುರಾವ್ ಸುಣಗಾರ, ಅರಕೇರಿ ನಿಂಗಪ್ಪ ರಾಮಪ್ಪಾ, ಶ್ರೀಮತಿ ಸುಜಾತಾ ಸೂರ್ಯಕುಮಾರ ಚೌಗುಲೆ ಅವರು ಆಯ್ಕೆಯಾದರು.
ಸಾಮಾಜಿಕ ನ್ಯಾಯ ಸಮಿತಿ:
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಶೈಲಜಾ ವಿದ್ಯಾಧರ ಕಾಗೆ ಅವರು ಆಯ್ಕೆಯಾದರು. ಸದಸ್ಯರಾಗಿ ಮಹೇಶ ಕುಂಬಾರ, ಶ್ರೀಮತಿ ಬಸವ್ವಾ ಕಾಮಪ್ಪಾ ಕುಳ್ಳೂರ, ಶ್ರೀಮತಿ ಲಕ್ಷ್ಮೀ ವಿಠ್ಠಲ ಪಾರ್ವತಿ, ಶ್ರೀಮತಿ ಶಿವಗಂಗಾ ಉಮೇಶ ಗೊರವನಕೊಳ್ಳ, ಶ್ರೀಮತಿ ಬಸವ್ವ ಬಸಪ್ಪ ಕೋಲಕಾರ, ಶ್ರೀಮತಿ ವಿಲಾಸಮತಿ ಈರಗೌಡ ಪಾಟೀಲ ಅವರು ಆಯ್ಕೆಯಾದರು.
ಸಾಮಾನ್ಯ ಸ್ಥಾಯಿ ಸಮಿತಿ:
ಅರುಣ ಕಟಾಂಬಳೆ (ಅಧ್ಯಕ್ಷರು), ಸುಮನ ಮಡಿವಾಳಪ್ಪ ಪಾಟೀಲ, ಕೃಷ್ಣಪ್ಪ ಬಾಲಪ್ಪ ಲಮಾಣಿ, ನಾರಾಯಣ ಲಕ್ಷ್ಮಣ ಕಾರ್ವೇಕರ, ಕುರುಬರ ಲಕ್ಷ್ಮೀ ನಿಂಗಪ್ಪ, ಸಿದ್ದಪ್ಪಾ ಅಪ್ಪಣ್ಣ ಮುದಕಣ್ಣವರ, ಮಂಜುನಾಥ
ಕಾಡಪ್ಪ ಪಾಟೀಲ ಅವರು ಸದಸ್ಯರಾಗಿ ಆಯ್ಕೆಯಾದರು.

ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿ:
ಅಜಿತ ಕೃಷ್ಣರಾವ ದೇಸಾಯಿ, ಗುರಪ್ಪ ಶಿವಲಿಂಗ ದಾಶ್ಯಾಳ, ಗಂಗಾಧರಸ್ವಾಮಿ ಮುದಿಬಾಳಯ್ಯಾ ತವಗಮಠ, ಮಾಧುರಿ ಅನಿಲ ಹೆಗಡೆ, ಪಾಟೀಲ ಸ್ನೇಹಲತಾ ಸತೀಶ, ಗುರುನಾಥ ಶಂಕ್ರೆಪ್ಪ ಗಂಗಲ ಸದಸ್ಯರಾಗಿ ಆಯ್ಕೆಯಾದರು.
ಹಲವು ಸದಸ್ಯರಿಂದ ನಾಮಪತ್ರ:
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಒಟ್ಟು 14 ಸದಸ್ಯರು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ 11 ಸದಸ್ಯರು, ಸಾಮಾಜಿಕ ನ್ಯಾಯ ಸಮಿತಿಗೆ 12 ಸದಸ್ಯರು, ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಗೆ ತಲಾ 8 ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ನಂತರ ಕೆಲವು ಸದಸ್ಯರು ನಾಮಪತ್ರ ಹಿಂಪಡೆದಿದ್ದರಂದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಯ ಅಂತಿಮ ಪಟ್ಟಿಯಲ್ಲಿ ತಲಾ 7 ಸದಸ್ಯರು ಉಳಿದು ಅವಿರೋಧ ಆಯ್ಕೆಯಾದರು. ಹಣಕಾಸು ಲೆಕ್ಕಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿಯಲ್ಲಿ 6 ಸದಸ್ಯರು ಅಂತಿಮ ಕಣದಲ್ಲುಳಿದು ಅವಿರೋಧ ಆಯ್ಕೆಯಾದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಅವರು ಫಲಿತಾಂಶವನ್ನು ಘೋಷಣೆ
ಮಾಡಿದರು. ಜಿಲ್ಲಾ ಪಂಚಾಯತನ ವಿವಿಧ ವಿಭಾಗದ ಅಧಿಕಾರಿಗಳು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ, ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕರಾದ ಗಣೇಶ ಹುಕ್ಕೇರಿ, ಶಾಸಕ ಮಹೇಶ ಕುಮಠಳ್ಳಿ, ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ್ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ, ಉಪಾಧ್ಯಕ್ಷರಾದ ಅರುಣ ಕಟಾಂಬಳೆ ಅವರು ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.